ಅಚಲ ಪ್ರೀತಿ
ಅಚಲ ಪ್ರೀತಿ
~~~~~~~~
ಪ್ರೀತಿ ಅಚಲವಾಗಿರಲಿ ಗೆಳತಿ
ಮನಸ್ಸು ಬಾಲವಿರದ ಕೋತಿ
ತಪನೆ ತಾನಾಗದಿರಲಿ ಅತಿ
ಅಗಲಿ ಇರಲಾರೆ ನಿನ್ನ ರತಿ ||ಪ||
ಈ ಬಾಳ ಬಾನಿನಲಿ ನೀನೇ ಶಶಿ
ಅನುದಿನವೂ ನಗುತಿರಲಿ ಖುಷಿ
ನಿನ್ನ ಪ್ರೇಮ ಆರಾದಿಸುವ ಋಷಿ
ನಾನಾಗುವೆ ಬಾರೇ ಪಟ್ಟದರಸಿ ||೧||
ಒಲವೆಂಬ ಹೂವ ಪ್ರೀತಿ ನಾವಾಗಿ
ನದಿಯೆದೆ ಸುಳಿ ಕಡಲಲೆ ನೀರಾಗಿ
ಬೇಕಾದ್ದು ಬೇಡದ್ದು ಒಳಗೆ ಅಡಗಿಸಿ
ದುಷ್ಟ ಜಂತಿನ ಒಳಸಂಚು ಎದುರಿಸಿ ||೨||
ಬಾಳ ಪಯಣದಿ ನಡೆವ ಒಡತಿ
ನಾಳೆ ನಮದೆಂದು ನುಡಿವ ಗೆಳತಿ
ಏಳು ಜನುಮವು ನಾವೇ ದಂಪತಿ
ಸಾಗಲಿ ಹೀಗೆಯೇ ಬಾಳ ಸಂಪ್ರೀತಿ||೩||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೬/೮/೨೦೧೭
Comments
Post a Comment