ಪ್ರೀತಿಯ ಸ್ವಾಗತ
ಪ್ರೀತಿಯ ಸ್ವಾಗತ
~~~~~~~~~
ಸ್ವಾಗತವು ನಿಮಗೆ ಪ್ರೀತಿ ಭರಿತ ಸ್ವಾಗತವು
ಎಳೆಯರೇ ಗೆಳೆಯರೇ ನಿಮಗಿದೋ ಸ್ವಾಗತ
ಬೆಳೆಯವ ಪ್ರಜೆಗಳೇ ಮನದಾಳದ ಸ್ವಾಗತ
ವಿದ್ಯಾ ದೇಗುಲವಿದು ಕರಮುಗಿದು ಬನ್ನಿರಿ
ವಿಶ್ವವಿದ್ಯಾಲಯದ ಶ್ರೇಷ್ಠ ಪದವಿಯಿದು
ಬದುಕಿನ ಹಲವು ಪದವಿಗೆ ಏಣಿಯಿದು
ನಗುತಾ ಸಾಗಲು ಬಾಳ ದೋಣಿಯದು
ಸಕಲ ಜ್ಞಾನದ ಭರವಸೆಯ ಗಣಿಯಿದು
ಬಾಳ ಪಯಣದ ಗೆಲುವು ನಿಮ್ಮದಾಗಲಿ
ನಿಮ್ಮೊಳಗೆ ಹೆಸರಾಂತ ಕವಿಗಳುದಿಸಲಿ
ಬೆಳಗಲಿ ಅಕ್ಷರದ ಹಸಿವು ನಿಮ್ಮೆದೆಯಲಿ
ಜ್ಞಾನದ ಜೋಗುಳ ನಿಮ್ಮಿಂದ ಮೊಳಗಲಿ
ಜಾತಿ ಮತದ ತಮವ ಅಳಿಸಿ ನಾವೆಲ್ಲರೂ
ಒಂದೇ, ದೇವರುಗಳು ಬೇರೆ ಬೇರಾದರೂ
ಮಾತಾಪಿತರು ಪ್ರತ್ಯಕ್ಷ ಮೂಲ ದೇವರು
ಬವಣೆಯೆಂದಿಗೂ ಪ್ರಕೃತಿಯ ಮರೆತರು
ಹಣತೆಯಿಂದ ಹಣತೆ ಹಚ್ಚುವಂತೆ ನಾವು
ಎಣ್ಣೆ ಬತ್ತಿ ಎರೆದು ಜ್ಯೋತಿ ಬೆಳಗುವೆವು
ದೇಶ ಭಾಷೆ ವೇಷಕ್ಕೆಲ್ಲ ಹೆಸರಾಗಿರಿ ನೀವು
ದೇಶಕ್ಕೆ ಆಸ್ತಿಯಂತೆ ಹೊರಹೊಮ್ಮಲಿ ಕಾವು
ಎಳೆಯರೇ ಗೆಳೆಯರೇ ನಿಮಗಿದೋ ಸ್ವಾಗತ
ಬೆಳೆಯವ ಪ್ರಜೆಗಳೇ ಮನದಾಳದ ಸ್ವಾಗತ
ವಿದ್ಯಾ ದೇಗುಲವಿದು ಕರಮುಗಿದು ಬನ್ನಿರಿ
ಪದವಿಯ ಸಂಪಾದಿಸಿ ಬಾಳಿನೆಡೆಗೆ ನಡೆಯಿರಿ
ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೨೫/೮/೨೦೧೮
Comments
Post a Comment