ಗೆಳೆತನ

ನಿಜ ಗೆಳೆಯರೇ ಜೀವರಹಿತ  ರೋಬೋಗಳನ್ನು ನಿಯಂತ್ರಿಸಲು ಅರಿತ ಮಾನವರಿಗೆ ತಮ್ಮಂತೆ ಜೀವವಿರುವ ಮನುಜರ ಮನಗಳನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ರೋಬೋಗಳನ್ನು ನಿಯಂತ್ರಿಸುವ ಕಲೆ ಅರಿತವಗೆ ನಿಜ ಮಾನವೀಯ ಮನುಜರಾರು ಪೊಳ್ಳು ಸುಳ್ಳುಗಳನ್ನಾಡಿ ವಂಚನೆಯನ್ನೇ ವೃತ್ತಿ ಮಾಡಿಕೊಂಡ ಮನುಜರಾರೆಂದು ಅರಿಯಲಾಗಲಿಲ್ಲ.

ಎಲ್ಲಾ ಬಲ್ಲವರು ಈ ಜಗದಲ್ಲಿ ಯಾರಿಲ್ಲ. ಕ್ಷಮಾಗುಣ ಎಲ್ಲರಲ್ಲೂ ಇರುವುದಿಲ್ಲ. ಕ್ಷಮಿಸಿದವನು ಬಲಿಷ್ಠ. ಕ್ಷಮೆ ಕೇಳಲಿ ಎನ್ನುವವರು ಕನಿಷ್ಠ. 

ಹಲಸು ಕಲ್ಲಂಗಡಿ ಹಣ್ಣುಗಳನ್ನು ಪರೀಕ್ಷಿಸಿ ಕೊಂಡು ಕೊಳ್ಳಬಹುದು. ಮನುಜರ ಮನಗಳನು ಪರೀಕ್ಷಿಸಿ ಗೆಳೆತನ ಮಾಡಲು ಸಾಧ್ಯವೇ.

ಗೆಳೆತನ ಎಂದರೆ ಗೆಳೆಯರು ಹೇಗಿರುತ್ತಾರೋ ಹಾಗೇಯೇ ಅವರಿಂದ ನಮಗಾಗಿ ಯಾವ ಬದಲಾವಣೆಗಳನ್ನು ಬಯಸದೇ  ಒಪ್ಪಿಕೊಳ್ಳುವುದೇ ಗೆಳೆತನ. 

ನನಗಾಗಿ ಗೆಳೆಯನ ಸ್ವಭಾವವನ್ನು ಬದಲಿಸಲು ಪ್ರಯತ್ನಿಸಿದರೆ ಅದು ಸ್ವಾರ್ಥ. ಹೊಂದಿಕೆಯಾದರೆ ಒಟ್ಟಿಗೆ ಪಯಣ ಇಲ್ಲದಿದ್ದರೆ ಒಂಟಿ ಪಯಣ.

ಈ ಎಲ್ಲವನ್ನೂ ಅರಿಯುವಷ್ಟು ಸಮಯ ಆ ದೇವನು ಕೊಡಲಿಲ್ಲ. ಮುಂದೇನೋ ಆ ದೇವರೇ ಬಲ್ಲ.

ವೈ. ಕೊ.
ವೈಲೇಶ ಪಿ ಯೆಸ್ ಕೊಡಗು
೨೩/೮/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು