ತಣಲ್ ಸಂಸ್ಥೆ
ಸಮರ್ಥ ಕನ್ನಡಿಗರು (ನೋಂ) ಮಡಿಕೇರಿ ಜಿಲ್ಲಾ ಘಟಕ.
ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ "ತಣಲ್ ಕೂರ್ಗ್" ತಣಲ್ ಎಂದರೆ ಮಳಯಾಳದಲ್ಲಿ "ನೆರಳು " ಎಂಬ ಅರ್ಥವನ್ನು ಬೀರುತ್ತದೆ. ಸಲಹುವವರರಿಲ್ಲದ ನಿರಾಶ್ರಿತರನ್ನು ಕೇಂದ್ರಕ್ಕೆ ಕರೆತಂದು ಉಪಚಾರ ಮಾಡಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಉತ್ತಮ ಚಿಕಿತ್ಸೆ ಕೊಡಿಸಿ ಅನಂತರ ಅವರಿಚ್ಛೆಯಂತೆ ಬದುಕು ಕಲ್ಪಿಸುವ ಕೇರಳ ಮೂಲದ ತಾಣವಿದು. ಕೊಡಗಿನಂತಹ ಸುಂದರ ತಾಣದಲ್ಲಿ ಸ್ಥಳೀಯ ದಿಕ್ಕಿಲ್ಲದವರ ದಿಕ್ಕಾಗಿ ನಿಂತವರ ವಿಚಾರವಿದು.
ಈ ಮೊದಲು ನಿರ್ಧರಿಸಿದಂತೆ ದಿನಾಂಕ ೨೯/೪/೨೦೧೮ ರಂದು ಭೇಟಿ "ತಣಲ್"ಗೆ ನೀಡಿದಾಗ ಸುತ್ತಲೂ ಹಸಿರನ್ನು ಹೊದ್ದ ಅಂಕುಡೊಂಕಾದ ರಸ್ತೆಯಲ್ಲಿ ಇಳಿದು ತಲುಪಿದಾಗ ಮೊದಲ ಸ್ವಾಗತ ಗೂಡಿನೊಳಗಿದ್ದ ಸಾಕು ನಾಯಿ ಎದುರಿನ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಕ್ಲೋಸ್ ಸರ್ಕ್ಯೂಟ್ ಕ್ಯಾಮೆರಾ. ಒಳ ಹೋದರೆ ಒಪ್ಪವಾಗಿ ಜೋಡಿಸಿದ ಕಚೇರಿಯ ವಾತಾವರಣ. ಮುಂದಿನ ಕೊಠಡಿಯಲ್ಲಿ ನಾಲ್ಕು ಖಾಲಿ ಮಂಚ ಸಹಿತ ಹಾಸಿಗೆಗಳು ಮತ್ತೆ ಎರಡು ರೂಮುಗಳಲ್ಲಿ ಹತ್ತರಿಂದ ಹದಿನಾರು ಜನರ ಮಂಚ ಹಾಸಿಗೆಗಳು. ನಡೆಯಲು ಕಷ್ಟವಿರುವವರಿಗೆ ವ಼ೀಲ್ ಚೇರ್ ಹಾಗೂ ಬಾತ್ ರೂಮಿಗೆ ಹತ್ತಿರದ ಕೊಠಡಿಯಲ್ಲಿ ವಸತಿ.
ಬಾತ್ ರೂಮು ಅಡಿಗೆ ಮನೆ ಮಲಗುವ ಕೋಣೆಗಳೆಲ್ಲಾ ಅತ್ಯಂತ ಸ್ವಚ್ಛ ಸುಂದರ ಆಧುನಿಕ
ನಿಜವಾಗಿಯೂ ಅದೊಂದು ಅರ್ಹ ಜನರ ಸಾಂತ್ವನ ಕೇಂದ್ರ ಎನಿಸಲೇ ಇಲ್ಲ. ಕಲ್ನಾರು ಸೀಟಿನ ಮನೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಪ್ಯಾನು ವಾಷಿಂಗ್ ಮೆಶಿನ್ ನೂತನ ರೀತಿಯ ಅಡಿಗೆ ಪರಿಕರಗಳು ಎಲ್ಲಾ ಇದ್ದವು. ಇಲ್ಲಿ ಮಹಮ್ಮದ್ ಮುಸ್ತಫಾ ಹಾಗೂ ನಾಸಿರ್ ಕೆ. ಪಿ. ಎಂಬವರು ತಮ್ಮ ಮನೆ ಹಾಗೂ ಭಾಗಶಃ ಸ್ಥಳವನ್ನು ಟ್ರಸ್ಟ್‌ಗೆ ದಾನವಾಗಿ ನೀಡಿದ್ದಾರೆ. ಜೊತೆಗೆ ಜಾತಿ ಮತ ಧರ್ಮದ ಭೇದವಿಲ್ಲದೆ ಹನ್ನೆರಡು ಜನ ಟ್ರಸ್ಟಿಗಳು ಇದ್ದಾರೆ. ಟ್ರಸ್ಟ್ ಅಧ್ಯಕ್ಷರಾದ ಮಹಮ್ಮದ್ ಮುಸ್ತಫಾ ನಮ್ಮ ಜೊತೆಯಲ್ಲಿ ಇದ್ದರು.
ಸರ್ಕಾರದ ಕಣ್ಣಿಗೆ ಬೀಳದಿದ್ದರೂ ಸಾರ್ವಜನಿಕರ ಕೃಪೆಗೆ ಬಿದ್ದಿದೆಯೆಂದರೆ ದಾನಿಗಳು ಹಾಗೂ ಟ್ರಸ್ಟಿಗಳ ಕೃಪೆಯಿಂದ ಸಂಸ್ಥೆ ಉತ್ತಮ ಕಾರ್ಯ ನಿರ್ವಹಿಸುತ್ತದೆ
ಇಂತಹ ಒಂದು ಸಂಸ್ಥೆಯನ್ನು ಗುರುತಿಸಿ ಸಮರ್ಥ ಕನ್ನಡಿಗರು ಬಳಗದ ವತಿಯಿಂದ ಏನಾದರೂ ಸಹಾಯ ಮಾಡಬೇಕೆಂದು ಸಮರ್ಥ ಕನ್ನಡಿಗರು ಬಳಗದ ಕೊಡಗು ಜಿಲ್ಲೆಯ ಪ್ರಧಾನ ಸಂಚಾಲಕಿ ಉಪನ್ಯಾಸಕಿ ಗೆಳತಿಯಂತಹ ಸಹೋದರಿ ಶ್ರೀಮತಿ ಜಯಲಕ್ಷ್ಮಿ ಕುಮಾರ್ ಅವರನ್ನು ಶ್ಲಾಘಿಸಬೇಕಿದೆ. ಅವರ ವಿದ್ಯಾರ್ಥಿಗಳು ಹಾಗೂ ಪತಿಯವರ ಸಹಕಾರ ಕೂಡ ಸಮರ್ಥನೀಯ ಎನ್ನಬಹುದು.
ಕಾರ್ಯಕ್ರಮ ಆಯೋಜಿಸುವ ಸಮಯದಲ್ಲಿ ನಿರ್ಧರಿಸಿದಂತೆ ಸಂಸ್ಥೆಗೆ ಏನಾದರೂ ಉಡುಗೊರೆ ನೀಡುವ ಜೊತೆಗೆ ಅಲ್ಲಿನ ಸದಸ್ಯರ ಜೊತೆಗೆ ಒಂದು ದಿನ ಕಳೆಯುವುದು ಹಾಗೂ ಮಧ್ಯಾಹ್ನದ ಊಟವನ್ನು ಅವರೊಂದಿಗೆ ನಾವು ಕೂಡ ಮಾಡುವ ಹಾಗೂ ಎಲ್ಲಾ ಸದಸ್ಯರೊಂದಿಗೆ ಬೆರೆತು ಅವರುಗಳ ಮನದಲ್ಲಿ ಮೂಡಿದ್ದ ಏಕಾಂಗಿ ಭಾವನೆಗಳನ್ನು ಅಳಿಸುವುದು ಅವರಿಗೆ ಮನರಂಜನೆ ಒದಗಿಸುವ ಮುಖಾಂತರ ಮನ ಅರಳಿಸುವ ಪ್ರಯತ್ನ ಮಾಡಬೇಕು ಎಂದು ಕೊಂಡೆವು.
ಸಂಸ್ಥೆಯ ವತಿಯಿಂದ ಔಷದಿ ಹಾಗು ಇನ್ನಿತರ ಪರಿಕರಗಳನ್ನಿಡಲು ಕಬ್ಬಿಣದ ರೇಕ್ , ೨೫ ಜನರಿಗೆ ಒಂದು ತಿಂಗಳಿಗಾಗುವ ಟೂತ್ ಪೇಸ್ಟ್ ,ಬ್ರಷ್ , ಸೋಪು , ಬಿಸ್ಕೆಟ್ ಪೊಟ್ಟಣಗಳನ್ನು ಉಚಿತವಾಗಿ ನೀಡಲಾಯಿತು . ದಿನದ ಮದ್ಯಾಹ್ನದ ಊಟವನ್ನೂ ಸಮರ್ಥ ಕನ್ನಡಿಗರು ಮಡಿಕೇರಿ ಘಟಕದ ಸದಸ್ಯರು ಸೇರಿ ಆಯೋಜಿಸಿದ್ದು , ಸಂಸ್ಥೆಯ ಸದಸ್ಯರೂ ಕೂಡ ಅವರಿಗೆ ಬಡಿಸಿ ಅವರ ಜೊತೆ ನಾವೆಲ್ಲರೂ ಊಟ ಮಾಡಿದೆವು.
ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ಅವರ ಜೊತೆ ಕಳೆದ ಸಮರ್ಥ ಕನ್ನಡಿಗರು ನೃತ್ಯ ,ಗಾಯನ ,ಕೀ ಬೋರ್ಡ್ ವಾದನದ ಮೂಲಕ ಅವರನ್ನು ರಂಜಿಸಿ ,ಅವರಗಳು ಕೂಡ ಈ ಚಟುವಟಿಕೆಗಳಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿ ಉತ್ಸಾಹದಿಂದ ಇದ್ದರು.
. ಕೊಡಗು ಜಿಲ್ಲಾ ಪ್ರಧಾನ ಸಂಚಾಲಕರಾದ ಜಯಲಕ್ಷ್ಮಿ .ಕೆ , ಗೌರವ ಸಲಹೆಗಾರರಾದ ಲಿಂಗೇಶ್ ಹುಣಸೂರು , ಪರಿಸರ ಜಾಗೃತಿ ಪ್ರಧಾನ ಸಂಚಾಲಕರಾದ ಸಂತೋಷ್ ಕುಮಾರ್ ಬಿ .ಎಮ್.,ವಿದ್ಯಾರ್ಥಿ ಪ್ರಧಾನ ಸಂಚಾಲಕ ರಾದ ಮೌನ ವಿ .ಜೆ ಒಳಗೊಂಡಂತೆ ಸುಮಾರು ೨೦ ಜನ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು . ಪ್ರಧಾನ ಸಂಚಾಲಕರು ಹಾಗೂ ಕವಿ ವೈಲೇಶ್ ಪಿ ಎಸ್ ಕೊಡಗು ಅವರುಸ್ಥಳದಲ್ಲೇ ಸ್ವರಚಿತ ಕವನ ರಚಿಸಿ ವಾಚಿಸಿದರು .
ಸಮರ್ಥ ಕನ್ನಡಿಗರ ನಿರ್ಗಮನಕೆ ಸನ್ನದರಾದ ಮರುಕ್ಷಣವೇ ನೀರವ ಮೌನ ಆವರಿಸಿ ನಮಗೂ ಹಾಗೂ ತಣಲ್ ಸದಸ್ಯರಿಗೂ ಕಣ್ಣು ಮಂಜಾಯಿತು ವಾರಕ್ಕೊಮ್ಮೆಯಾದರೂ ಬನ್ನಿ ಎನ್ನುವ ಅವರ ಆಹ್ವಾನ ಕಣ್ಣುಗಳನ್ನು ಮತ್ತೆ ಒದ್ದೆಗೊಳಿಸಿತ್ತು . ಸ್ವಚ್ಛತೆಗೆ ಒತ್ತು ಕೊಟ್ಟು ಹಾಗೂ ತಣಲ್ ಸದಸ್ಯರನ್ನು ತಮ್ಮ ಮಕ್ಕಳಂತೆ ಕಾಣುತ್ತಿರುವ ಅಧ್ಯಕ್ಷರಾದ ಮಹಮ್ಮದ್ ಮುಸ್ತಫಾ ಅವರನ್ನು ಶ್ಲಾಘಿಸಿಸಿದೆವು . ಇಲ್ಲಿ ಈ ಸಂಸ್ಥೆಯ ಆದಾಯಕ್ಕಾಗಿ ನಾಸಿರ್ ಕೆ ಎ ಎಂಬ ಹೊಟೇಲ್ ಉದ್ಯಮಿಯೊಬ್ಬರು ಮನಃಪೂರ್ವಕವಾಗಿ ದಾನ ಮಾಡಿರುತ್ತಾರೆ. ಹಾಗೂ ಮಹಮ್ಮದ್ ಮುಸ್ತಫಾ ತಮ್ಮ ಹಳೆಯ ವಾಸದ ಮನೆಯನ್ನೇ ಬಿಟ್ಟು ಕೊಟ್ಟಿರುತ್ತಾರೆ. ಅಲ್ಲದೇ ಬಾಬುಚಂದ್ರ ಉಳ್ಳಾಗಡ್ಡಿ, ಪ್ರೇಮ್ ಕುಮಾರ್, ನಾಸಿರ್ ಎಂ ಎ ,ರಜಾಕ್, ಜೆರ್ಮೀ ಪೀಟರ್, ಅರವಿಂದ್ ಕೆಂಚೆಟ್ಟಿ ಇವರೊಂದಿಗೆ ಯಾವುದೇ ಧರ್ಮದ ಜಾತಿಯ ಹಂಗಿಲ್ಲದೆ ಸಂಸ್ಥೆಗಾಗಿ ಅಹರ್ನಿಶಿ ದುಡಿಯುವ ಟ್ರಸ್ಟಿಗಳು ಇದ್ದಾರೆ.
ಕಾಲ ಕೆಟ್ಟಿದೆ ಮನುಜ ಕೆಟ್ಟಿದ್ದಾನೆ ಎಂಬೆಲ್ಲಾ ಮಾತುಗಳು ಇಂದು ಸರ್ವೇ ಸಾಮಾನ್ಯ. ನಿಜವಾಗಿಯೂ ಇವೆಲ್ಲವೂ ಸುಳ್ಳು ಮಾನವ ಮನದಲ್ಲಿ ಇನ್ನೂ ಮಾನವೀಯತೆ ಕರುಣೆ ಬರಿಯ ಸ್ವಾರ್ಥ ತುಂಬಿದ ಬದುಕಲ್ಲದೇ ಸಮಾಜದಿಂದ ನಾವು ಪಡೆದುದಲ್ಲದೇ ಸಮಾಜಕ್ಕೆ ನಾವು ಕೂಡ ಏನಾದರೂ ಕೊಡಮಾಡಬೇಕೆಂಬ ಭಾವನಾತ್ಮಕ ಮನಸ್ಸಿನ ನಿಜವಾದ ಮನುಷ್ಯರು ಇದ್ದಾರೆ ಎಂಬುದಕ್ಕೆ ಇವರೆಲ್ಲರೂ ಸಾಕ್ಷಿಯಾದವರು ತಣಲ್ ಸದಸ್ಯರುಗಳಲ್ಲಿ ಎಲ್ಲಾ ಧರ್ಮದ ಜನರಿದ್ದಾರೆ. ಭಾರತದ ದೇಶದಲ್ಲಿ ಸುಮಾರು ಹತ್ತೊಂಬತ್ತು ಬ್ರಾಂಚ್ ಹೊಂದಿರುವ ನೆರಳು ಸಂಸ್ಥೆಯ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳಿಗೆ ಒಳಿತಾಗಲಿ ಇಂತಹ ಸಂಸ್ಥೆಗಳು ಹೆಚ್ಚಾಗಲಿ ಮಾನವ ಧರ್ಮ ಮೆರೆಯಲಿ ಎನ್ನುವೆ.
ತಮ್ಮವನೇ
ವೈಲೇಶ ಪಿ ಯೆಸ್ ಕೊಡಗು
೩೦/೪/೨೦೧೮
Comments
Post a Comment