ಆಡುವ ಕೂಸು
ಆಡುವ ಕೂಸು
~~~~~~~~
ಆಡುವ ಕೂಸಿಗೆ ಕಾಡುವ ಕೂಸು
ನಾನೇ ತೊಳೆದಿರುವೆ ಕಕ್ಕ ಸೂಸು
ಅಯ್ಯೋ ಹಸಿವಿನಲಿ ಅಳುತಲಿದೆ
ಕೊಡಲಾದರೂ ಇದೆ ಎನ್ನಲೇನಿದೆ
ಅಮ್ಮನಿಟ್ಟ ಅಂಬಲಿ ಮುಗಿದಿದೆ
ಅಪ್ಪ ಕೊಟ್ಟ ಪಾವಲಿ ಕರಗಿಸಿದೆ
ತಮ್ಮನ ಕೆಟ್ಟ ಹಸಿವು ಹೆಚ್ಚುತಿದೆ
ನನ್ನ ಕರುಳಿದು ಕುಟ್ಟಿ ಚುಚ್ಚುತಿದೆ
ಅಮ್ಮ ಬರುವುದು ಸಂಜೆ ಹೊತ್ತಿಗೆ
ಅಪ್ಪ ಬರುವರು ತೂರಾಡಿ ಮೆತ್ತಗೆ
ಶಾಲೆಗೆ ಹೋಗುವ ಬಯಕೆ ಎನಗೆ
ಅದೇಕೊ ಕಂದನ ಕಾಯುವ ಬೇಗೆ
ಕೆಲಸಕ್ಕೆಂದೇ ಪಟ್ಟಣಕ್ಕಿಳಿದರು
ಅಜ್ಜ ಅಜ್ಜಿ ಊರಲಿ ಉಳಿದರು
ಯಾರಿಲ್ಲದೇ ನಮ್ಮ ಕಾಯ್ವವರಾರು
ಕಂದಮ್ಮಗಳ ಬಿಡದಿರಿ ಹೀಗೆ ನೀವ್ಯಾರು
ವೈ.ಕೊ.
೨೪/೭/೨೦೧೮
Comments
Post a Comment