ಗಝಲ್ : ೩೭
ಗಝಲ್ : ೩೭
~~~~~~~
ಮುಂಜಾನೆಯ ಮಂಜಿನಂತೆ ಕರಗುತಿದೆ ನಿಮ್ಮ ನೆನಪು
ಕಾಲಚಕ್ರದ ಜೊತೆಗೆ ಮಾಸಿ ಮರೆಯಾಗಿದೆ ನಿಮ್ಮ ನೆನಪು
ಅಪ್ಪನ ಬೆರಳ್ಹಿಡಿದು ನಡೆದ ಹರ್ಷ ಕಾಣೆಯಾಗಿದೆಯಿಂದು
ಅಮ್ಮನೆದೆಗೂಡಿನ ಬಿಸಿಯ ಮರೆಯದಾಗಿದೆ ನಿಮ್ಮ ನೆನಪು
ಹಚ್ಚ ಹಸುರಿನ ನಡುವೆ ಬಿಚ್ಚಿಟ್ಟ ಮನವದು ನಿಮ್ಮದಾಗಿತ್ತು
ಹೃದಯ ಸ್ತಂಭನದಂತೆ ನಿಂತು ಹೋಗುತಿದೆ ನಿಮ್ಮ ನೆನಪು
ತಮ್ಮ ಸಂಗದಲಿ ನಲಿದಿತ್ತು ಬಾಳಿನೊಲುಮೆಯ ಸವಿಯು
ಸಕಲ ಸುಖದ ಚಣದಲಿ ಮತ್ತೆ ಮರಳುತಿದೆ ನಿಮ್ಮ ನೆನಪು
ನೀವರಿಯದೇ ನಮ್ಮನು ಬುವಿಗೆ ಎಳೆತಂದವರಲ್ಲವೇ ನೀವು
ಹೆಸರುಳಿಸುವ ಪ್ರಯತ್ನ ಅನವರತ ಜೊತೆಗಿದೆ ನಿಮ್ಮ ನೆನಪು
ನಿಮ್ಮಂತಹ ಪೋಷಕರು ದೊರೆತುದು ಪೂರ್ವ ಜನ್ಮದ ಪುಣ್ಯ
"ಸಿಡಿಲು"ನ ನೂರು ಜನ್ಮಕೆ ಪುಣ್ಯಭೂಮಿಯಿದೇ ನಿಮ್ಮ ನೆನಪು
ವೈಲೇಶ ಪಿ ಯೆಸ್ ಕೊಡಗು
೯/೭/೨೦೧೮
Comments
Post a Comment