ವಿಧಿ ವಿಪರೀತ

ವಿಧಿ ವಿಪರೀತ
~~~~~~~~
ಏನೀ ವಿಪರ್ಯಾಸ
ವಿಧಿ ವಿಪರೀತದ ವಿಷ
ಇದ್ದವೆರಡೂ ಕೂಸಿನೆಡೆಗೆ
ಕಣ್ಣು ಬಿತ್ತೇ ಜವರಾಯಗೆ

ಕುಲಪುತ್ರನವನಿಲ್ಲ ಮಿಗೆ
ಕನ್ಯಾದಾನವು ಇನ್ಹೇಗೆ
ಬಾಳಿನಾಸರೆಯು ಹೋಗೆ
ಬಾಳುವಾಸೆಯು ಮೃತ್ತಿಕೆಗೆ

ಹೆಣ್ಣು ಗಂಡೆಂದೆಣಿಸದೇ
ಬಿಡಬಾರದಿತ್ತೆ ಒಂದೆಮಗೆ
ಎರಡೂ ಕಣ್ಣನು ಕಿತ್ತ ಮ್ಯಾಗೆ
ಉಸಿರನುಳಿಸಿದೆ ಏಕೆ ನಮಗೆ

ಯಮರಾಜನೇ ನಿನ್ನೊಲುಮೆಗೆ
ಕಂದಮ್ಮಗಳ ಜೀವವೇ ತರವೇ
ಪುತ್ರ ಶೋಕವೇ ಸಹಿಸಲಸದಳ
ನಿಲ್ಲದಾಗಿದೆ ಕಂಬನಿ ಗಳಗಳ.

ವೈಲೇಶ ಪಿ ಯೆಸ್ ಕೊಡಗು
೧೨/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು