ಧರಿತ್ರಿ ಮತ್ತು ಧರಣಿ

ಧರಿತ್ರಿ ಮತ್ತು ಧರಣಿ
~~~~~~~~~~~~~~~
ಮುತೈದೆ ಮಡಿಲಿಗೆ ಕೋಟಿ ಮುತ್ತುನೀದು
ಲೆಕ್ಕವಿಡದ ಜೀವಜಾಲಕೆ ಜೀವಜಲವಿದು
ಸುರಿದ ಹರಿದ ಹನಿಗಳನೆಣಿಸಿ ಹರಡಿಹುದು
ವರುಷದ ಹರುಷವ ಮತ್ತೆಳೆದು ತಂದಿಹುದು

ಬರಿದಾಗಿ ಒಣಗಿ ಬಿರಿದ ಕರೆಗೆ ಕಾಯಕಲ್ಪ
ಹರವಿ ಬಿತ್ತಿ ಹೆಣಗುವ ಬಿತ್ತಕೆ ಕಾಯಕ ತಲ್ಪ
ಸೊರಗಿ ಕೊಳೆತು ನಿಂತು ನಾರಿದ ಹಳ್ಳ ತೊರೆಗೆ
ಜಲಚರದ ಜೊತೆಗೆ ಬೇಟೆ ತೀಟೆಯ ಮಹಾ ಲಗ್ಗೆ

ಬಳಲಿ ಬೆಂಡಾದ ಗುಡಿಸಲು ಮರಕೆ ವಾಹನ
ಭೂದೇವಿಯಾಸರೆ ಇದೇ ನೆಪದಲಿಷ್ಟು ಹನನ
ನಿದಿರಿಗೆ ಬಿದ್ದವರ ಮೇಲ್ಬಿದ್ದ ಮನೆಗೆ ಮರಣ
ಬದುಕುಳಿದವರ ಪಾಡು ಸುಖ ದುಃಖದ ಹರಣ

ಅರಿಯದೇ ಆಗಮನ ಅರಿಯಾದ ಗಂಗಮ್ಮ
ನಮ್ಮ ಪಾಡಿಗೆ ನಾವಿರಲು ಗಪ್ಪನೆ ನುಂಗಮ್ಮ
ಬೇಕು ಬೇಕೆಂದವರು ಸಾಕು ಸಾಕೆನ್ನುತಿಹರು
ಬೇಡ ಬೇಡವೆಂದು ಧರಣಿ ಕೂರೋದು ಯಾರು?

ವೈಲೇಶ ಪಿ ಯೆಸ್ ಕೊಡಗು
೧೭/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು