ದೀಪ ಬದುಕು
ದೀಪ ಬದುಕು
~~~~~~~~~
ಬದುಕಬೇಕು ದೀಪದಂತೆ|ಬೇದ ಭಾವ ಬೆರೆಯದಂತೆ|
ಅರಿವು ಜಗಕೆ ಹಂಚುವಂತೆ| ದುಃಖ ನೋವ ಮರೆಸುವಂತೆ|
ಸರ್ವರೊಲವು ಪಡೆಯುವಂತೆ|ಜಗಕೆ ಒಲವ ನೀಡುವಂತೆ||ಪ||
ಹಿರಿಯರೇನು| ಕಿರಿಯರೇನು| ಬೇದ ತೋರದಂತೆ|
ಜಾತಿ ನೀತಿ| ಮತವ ಮೀರಿ| ಬೆಳಕು ಹರಡುವಂತೆ|
ಮನುಜ ಮತವು ಒಂದೇ ಎಂಬ ಜ್ಞಾನ ಹರಡಿದಂತೆ||೧||
ತನುವಿನೊಳಗ ಹಸಿವಿನಂತೆ| ಮಗ್ದ ಮಗುವ ನಗುವಿನಂತೆ|
ಜಗವ ಸೂರ್ಯ ಬೆಳಗುವಂತೆ| ಚಂದ್ರ ತಾರಾ ಗ್ರಹಗಳಂತೆ|
ಹರಿವ ನದಿಯ ನೀರಿನಂತೆ| ತಾಯ ಒಡಲ ಕ್ಷೀರದಂತೆ ||೨||
ಗುಡಿಯೆ ಇರಲಿ|ಗುಡಿಸಲಿರಲಿ| ಬೆಳಕು ಏಕವಂತೆ|
ಶಾಂತಿಯಿಂದ ಉರಿಯಬೇಕು|ಬದುಕು ಬೆಳಗುವಂತೆ|
ಜಗದ ಜನರ ಕತ್ತಲೆಯನು| ದೂರಗೊಳಿಸುವಂತೆ||೩||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೬/೭/೨೦೧೭
Comments
Post a Comment