ಜನುಮ ದಿನ
ಸುತ್ತ ಮುತ್ತ ಹೊಗೆಸೊಪ್ಪು
ನದಿಯ ನೀರು ಎಣ್ಣೆಗೆಂಪು
ಬೀಸೋ ಗಾಳಿ ತಂಪು ತಂಪು
ಸೋನೆ ಮಳೆಗೆ ಕೆಸರ ಪಂಪು
ಕಾಡುತಿದೆ ಅವ್ವನ ನೆನಪು
ಅಪ್ಪನ ಮಾತುಗಳ ತಂಪು
ಒಲವಿನ ಅಣ್ಣ ಅತ್ತಿಗೆಯರು
ಇವೆರಡು ಜಾಗವ ತುಂಬಿದರು
ಕೊಟ್ಟಿಗೆ ತುಂಬಾ ರಾಸುಗಳು
ದೊಡ್ಡಿಯಲಿ ಆಡು ಕುರಿಗಳು
ಒಂದಿಗೆ ಬೆಳೆದ ಗೆಳತಿಯರು
ಮೊಮ್ಮಕ್ಕಳ ಸಲಹುತಿಹರು
ಶಿರ ಮೀರಿ ಬೆಳೆದ ಕಂದಮ್ಮರು
ಜನುಮದ ಸಿಹಿಯ ತಂದಿಹರು
ಎಳವೆಯಲಿ ಮಕ್ಕಳ ಜನ್ಮದಿನ
ನಾನರಿಯೆ ನನ್ನ ಜನುಮದ ದಿನ
ಸಿಂಧೂರವ ನೊಸಲಿಗೆ ಹೆಚ್ಚಿ
ಪುಟ್ಟಿದ ಮನೆ ಹಣತೆಯ ಹಚ್ಚಿ
ತವರೇಳಿಗೆಯು ಉಕ್ಕಲಿ ಮೆಚ್ಚಿ
ಕುಲದೇವರ ಬೇಡುವೆನು ನೆಚ್ಚಿ
ವೈಲೇಶ ಪಿ ಯೆಸ್ ಕೊಡಗು
೭/೭/೨೦೧೮
Comments
Post a Comment