ಗುರುವಿಗೆ ಶರಣು

ಗುರುವಿಗೆ ಶರಣು
~~~~~~~~~
ಅರಿವಿನ ಅರಿವೆಯ ತೊಡಿಸಿದ
ಗುರುವಿಗೆ ಶರಣು|
ಅರಿಯದೇ ಹಣತೆಯ ಉರಿಸಿದ
ಹಿರಿಯಗೆ ಶರಣು ||ಪ||

ಅಜ್ಞಾನದ ಕಿಡಿಯನು ತೊಡೆದಿಹ
ಅನುಜಗೆ ಶರಣು|
ವಿಜ್ಞಾನದ ಬೆರಗನು ಬಡಿಸಿದ
ಕಲಂರಿಗೆ ಶರಣು ||೧||

ಬಸವರ ವಚನದಿ ಉದಿಸಿದ
ಶರಣಗೆ ಶರಣು| 
ಅಕ್ಕಮ್ಮನ ಅಕ್ಕರೆಯ ಅರುಹಿದ
ಎನ್ನಕ್ಕಗೆ ಶರಣು||೨||

ಎನ್ನೊಳಗೆ ಭಕುತಿಯ ಬೆಳೆಸಿದ
ಭಕುತಗೆ ಶರಣು|
ಸಕಲರ ಸರಿಸಮ ದೈವವೆಂದು
ಕಾಂಬವಗೆ ಶರಣು||೩||

ಅರಿವೆಂಬ ಗುರುವಿಗೆ ಮರೆಯದೆ
ಅನುದಿನ ಶರಣು|
ಜಗದೊಳು ಜ್ಞಾನಿಗಳ ತಂದವರ
ಸುಜ್ಞಾನಕೆ ಶರಣು||೪||

ವೈ.ಕೊ.
೨೭/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು