ದಡ್ಡ ದಡ್ಡ

ದಡ್ಡ ದಡ್ಡ
~~~~~
ಮಂಜೂರು "ಮಾಡಲಾಗಿ" ಇಲ್ಲಿಗೆ ನಿಲ್ಲಿಸಿದೆ
ಈಗ ಹೇಳಿ ವ್ಯಾಪಾರ ಮಾಡಬೇಕಾಗಿದೆ
ಕೊಟ್ಟಿದ್ದು ಇಷ್ಟವಾದರೆ "ದೆ" ಸೇರಿಸುವುದೆ
ಇಲ್ಲದಿದ್ದರೆ "ಲ್ಲ" ಎಂದಾದರೆ ಸಾಕಾಗುವುದೆ

ಅದಕ್ಕಿಷ್ಟು ಇದಕ್ಕಿಷ್ಟು ಬೋರ್ಡ್ ಬರೆದಿಲ್ಲ
ಎಲ್ಲವೂ ಟೀ ಚರ್ಚೆಯಲಿ ಮುಗಿಯೊಲ್ಲ
ಸಂಜೆ ಪಾನಗೋಷ್ಠಿಯಲಿ ನಿಮ್ಮ ಕಾಣಲಿಲ್ಲ
ಈಗ ಬಂದರೆ ಕೆಲಸ ಮುಂದುವರಿಯದಲ್ಲ

ಸಂಬಳದ ಹೊರತು ಗಿಂಬಳದ್ದೇ ಧ್ಯಾನ
ಕಾಫಿಗೆಂದೇ ಬರುವವರು ದೂಮಪಾನ
ಮದ್ಯಪಾನದ ಜೊತೆಗೆ ರೋಗದಾಗಮನ
ಮಡದಿ ಮಕ್ಕಳಿಗೆ ಉತ್ತಮ ಬಹುಮಾನ 

ದೊಡ್ಡ ಕುಳಗಳು ಲೆಕ್ಕವಿಡದೇ ಕೊಟ್ಟಾರು
ಕಡುಬಡವನ ಕಥೆಯ ಕೇಳುವವರಾರು
ಬಡವರ ಕಡತಗಳು ಕುಳಿತಲ್ಲೇ ಬಿದ್ದಿವೆ
ಉಳಿದವರ ಕಡತಗಳು ಕಾರಿನಲ್ಲಿ ಚಲಿಸಿವೆ 

ಪ್ರತಿಭಟನೆ ಇಲ್ಲಿ ನಿಷಿದ್ಧ ಮಾತ್ರವಲ್ಲ
ಬದುಕಲರಿಯದ ಮೂಢಾ ಎನುವರೆಲ್ಲ
ಜಗವೆ ಅರಿವೆಂಬ ಅರಿವೆಯ ಎಸೆದಿರುವಾಗ
ಅರಿವಿನರಿವೆಯ ತೊಟ್ಟವರು ದಡ್ಡರಾದರೀಗ

ವೈಲೇಶ ಪಿ ಯೆಸ್ ಕೊಡಗು
೨೦/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು