ಗಝಲ್ ೩೬
ಗಝಲ್ ೩೬
~~~~~~~
ಓ ಮದನಿಕೆ ನಿನ್ನಿಂದ ನಮ್ಮ ಬಾಳಂದವಾಗಿದೆ ಎಂಬೆನು ಸಖಿ
ನಿನ್ನ ಮನಸಿಗೆ ನನ್ನಿಂದ ಬಲು ಘಾಸಿಯಾಗಿದೆ ಎಂಬೆನು ಸಖಿ
ನೂರಾರು ದುಃಖಗಳ ನಾವೆಯೊಳು ನಾನಂದು ಮುಳುಗಿದ್ದೆ
ನೀ ಬರದಿರೆ ಮತ್ತೆಲ್ಲಿ. ಸುಖಿ ಮನ ಹಸನಾಗಿದೆ ಎಂಬೆನು ಸಖಿ
ಅಂದದ ವದನದಿ ಇಂದೇಕೆ ಹುಸಿಮುನಿಸು ಅರಿಯದಾಯಿತೇ
ಅರಿತರಿಯದೇ ಗೈದುದ ಅನವರತ ಮರೆತಾಗಿದೆ ಎಂಬೆನು ಸಖಿ
ತೆರೆಯೊಳೇಳುವ ತರಂಗದೋಪಾದಿ ನಿನ್ನ ನಗುವಿನಲೆಯ ಬುಗ್ಗೆ
ನಗದ ಮೊಗಕೆ ನೀನೀದ ಒಲವು ಫಲಿತವಾಗಿದೆ ಎಂಬೆನು ಸಖಿ
ಮನ ಮನದ ಭಾವನೆಯು ನಿನ್ನಿಂದ ಸ್ವರ್ಗಕೂ ಮಿಗಿಲಾಯ್ತಿಂದು
ಸುಖ ದುಃಖಗಳ ಸಮವೀದು ಮುದಗೊಳಿಸಿದೆ ಎಂಬೆನು ಸಖಿ
ಏನೇನು ಇರದ ಬದುಕಿನಲಿ ನಿನ್ನ ಹೆಜ್ಜೆಯದು ಭಾಗ್ಯವನು ತಂದಿತು
"ಸಿಡಿಲು"ನ ಬಾಳುವೆಯು ಬಂಗಾರದ ಹೋಳಾಗಿದೆ ಎಂಬೆನು ಸಖಿ
ವೈಲೇಶ ಪಿ ಯೆಸ್ ಕೊಡಗು
೬/೭/೨೦೧೮
Comments
Post a Comment