ಗ್ರಹಣ
ಗ್ರಹಣ
~~~~
ಗ್ರಹಣಕ್ಕಾಗಿ ಬೇಡ ಹಗರಣ
ಸೌರಮಂಡಲವಲ್ಲ ರಣಾಂಗಣ
ಮೂಢನಂಬಿಕೆಯ ಅನುಕರಣ
ಸ್ವಚ್ಛ ಮನಸ್ಸಿನ ವೃಥಾ ಅಪಹರಣ
ನೀರು ನಿಡಿ ಅಡುಗೆ ಬಡಿಗೆಯನೆಲ್ಲ
ಬಿಸುಟುಬಿಡಿ ಎಂದು ಅಂದವರೆಲ್ಲಾ
ಕೇಳಿ ಮನದ ಅಳುಕುಗಳ ಬಿಸುಡಿರೆಲ್ಲ
ಬಿಸುಡಿರಿ ತಮ್ಮ ಅಮೂಲ್ಯ ವಸ್ತುಗಳ
ನಿಮ್ಮ ನಂಬಿಕೆ, ಅಪನಂಬಿಕೆ ನಮಗಿಲ್ಲ
ಅಪ್ಪ ನೆಟ್ಟ ಮರಕೆ ಜೋತು ಬಿದ್ದಿರಲ್ಲ
ಜಗವ ಬೆಳಗುವ ಜ್ಯೋತಿಯು ಚಂದ್ರ
ಕೊರತೆಯಿಂದವಗೆ ಬೆಳಕಿನ ಸಾಂದ್ರಾ
ಅಡ್ಡಾದಿಡ್ಡಿ ಅರೆಗಳಿಗೆಯ ಅಪಶಕುನ
ಅಡ್ಡ ಬಂದವ ನಡೆದೊಡೆ ಶುಭಶಕುನ
ಅಡ್ಡದಾರಿಗೆಳೆಯದಿರಿ ಅರೆಬರೆಗಳನು
ಒಡನಾಡಿಗಳಾಗಿ ತ್ಯಜಿಸಿ ಅತ್ಯಾಸೆಯನು
ವೈ.ಕೊ.
೨೭/೭/೨೦೧೮
Comments
Post a Comment