ಕಾರ್ಗಿಲ್ಲು ನೀರ್ಗಲ್ಲು

ಕಾರ್ಗಿಲ್ಲ ನೀರ್ಗಲ್ಲು
~~~~~~~~~~

ಉಂಗುರುವೊಂದು‌| ಕಾದಿತ್ತಾ ಗೆಳೆಯ|
ನೀನೆಂದು ಬರುವೆಯೆಂದು|
ಕಾತರದಿ ತಳಮಳಿಸಿ|ಹಾಡುತ್ತಾ ಇನಿಯ‌
ನಿನ್ನ ಬೆರಳ  ಸೇರಲೆಂದು||ಪ||

ಎಳೆತನದ ಬಡತನಕೆ| ಬೆದರಿದಾ ಜೀವ|
ಸೇನೆಯ ಅಪ್ಪಿತ್ತಾ|
ಗೆಳೆಯರ ಬಂಧು ಬಾಂಧವರ ಭಾವ|
ಬೇರೆಯೆ ಆಗಿತ್ತಾ                      ||೧||

ಎನ್ನ ಜೀವವು ಗೆಳೆಯ|ನಿನ್ನ ಬೆನ್ನೆಲುಬಾಗಿ|
ಹಿತವ ಬಯಸಿತ್ತಾ|
ವಿಧಿಯ ಆಟವದು| ಒಲವ ಬಯಸದೇ|
ಜೀವ ಸೆಳೆದಿತ್ತಾ                       ||೨||

ಕಾರ್ಗಿಲ್ಲ ನೀರ್ಗಲ್ಲ|  ನಟ್ಟಿರುಳ  ಕಾವಲು |
ನಿನದೇ ಆಗಿತ್ತಾ|
ಹೇಡಿ ಪಾಕಿಗಳ |ವಂಚನೆಯ ಗುಂಡಿಗೆ|
ಗುಂಡಿಗೆ ಸಿಡಿದಿತ್ತಾ                      ||೩||

ರಜೆಗೆ ಮಗ ಬರುವ| ಎಂಬ ಮಾತಾಪಿತರ|
ಆಸೆ ಮಣ್ಣು ಸೇರಿತ್ತಾ
ಅಣ್ಣ ಬಂದೊಡನೆ| ಆರತಕ್ಷತೆ ಎಂದ ತಂಗಿಯ|
ಮನವದು ಮುದುಡಿತ್ತಾ     ‌‌‌‌‌                  ||೪||

ರಜೆಗೆ ಬರುವ ನಿನ್ನ| ಕನಸು ನೀರ್ಗಲ್ಲ
ಜೊತೆಗೆ ಕರಗಿತ್ತಾ|
ನಮ್ಮ ಮದುವೆಯ| ಸೊಗಸು ಅಳಿದು|
ಮಸಣ ಸೇರಿತ್ತಾ|
ಇನಿಯ ಮಸಣವ ಸೇರಿತ್ತಾ         ||೫||

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೬/೭/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು