ಗಝಲ್ ೩೮
ಗಝಲ್ : ೩೮
~~~~~~~~
ಕನ್ನೆ ನಿನ್ನ ಕೆನ್ನೆ ಗುಳಿಯಲಿ ನಾ ಕರಗಿ ಹೋದವನೆ
ನಿನ್ನೆ ಎನ್ನ ಹೃದಯದೆದೆಯಲಿ ನಿನ್ನ ಮರೆತೆಯೇನೆ
ನಗುವ ವದನ ಚೆಲುವ ಸದನ ನಿನ್ನಿಂದಾಗುವುದು
ನಿನ್ನೊಲುಮೆ ಹಣತೆ ಬಾಳ ಬೆಳಗುವುದೆಂದಿಗೇನೆ
ಮೊಗದ ಹಿರಿಮೆಗೆ ನೊಗವು ನಿನ್ನೆರಡು ನಯನಗಳೆ
ಕಣ್ಣ ಹೊಳಪಿನೊಳು ಬಣ್ಣವನೀವೆ ಒಪ್ಪುವೆಯೇನೆ
ರಸಕಾವ್ಯ ತಜ್ಞನೆಂಬ ಹಮ್ಮು ಬಿಮ್ಮು ಎನಗಿರದಿರಲಿ
ರಸ ಋಷಿಗೆ ಜೀವವನಿತ್ತ ಕಾವ್ಯ ಕನ್ನಿಕೆಯು ನೀನೇನೆ
ಮನದಳಲು ನಗುತಿರಲಿ ನೋವೆಂದು ಇಣುಕದಿರಲಿ
ಅನುದಿನ ಸಂತಸದಿಂದಿರುವ ವರವ ನಾ ನೀಡುವೆನೆ
ನಿನ್ನಂದದಾ ಸವಿಗೆ ಆನಂದ ಹೊಂದಲು ಕಾದಿರುವೆ
ಬಳಿ ಬಂದು ತೃಷೆಯ ತಣಿಸೆಂದು ನಾ ಕಾಯುತಿಹೆನೆ
ಕದಪು ಕೆಂಪಾಗಿಸುವ ಸಿರಿಯಾನಂದ "ಸಿಡಿಲು" ನದು
ಒನಪು ಒಯ್ಯಾರದಲಿ ಮನದೊಳಗೆ ಬರುವೆಯೇನೆ
ವೈ.ಕೊ.
೨೨/೭/೨೦೧೮
Comments
Post a Comment