ಲೇಖನ ಸ್ಪರ್ಧೆಗಾಗಿ ನಿವೃತ್ತಿ ಮಿತಿ

ಉನ್ನತ ಸಂಸ್ಥೆಗಳಲ್ಲಿ ಅನುಭವಿಗಳ, ಜ್ಞಾನಿಗಳ ಅಗತ್ಯ ಬಹಳಷ್ಟಿದೆ.
ಆದರೆ ಅದಕ್ಕಾಗಿ ನಿವೃತ್ತಿಯ ವಯೋಮಿತಿ ಏರಿಕೆ ಮಾಡುವುದು  ಸರಿಯೇ

                   ನಿಜವಾಗಿಯೂ ನನಗೂ ಒಮ್ಮೊಮ್ಮೆ ಅನಿಸಿದ್ದುಂಟು ಅನುಭವ ಮೀರಿದ ಅರ್ಹತೆಯಿಲ್ಲ ಆದ ಕಾರಣ ಅನುಭವದ ಆಧಾರದ ಮೇಲೆ ಸೇವಾ ಅವಧಿಯನ್ನು ಹೆಚ್ಚಿಸಬೇಕೆಂದು ಯಾಕೆಂದರೆ ಅನುಭವಕ್ಕಿಂತ ಗುರುವಿಲ್ಲ ಆದರೆ ವಯೋಸಹಜ ಅನಾರೋಗ್ಯ, ನಿಶ್ಯಕ್ತಿ, ದೃಷ್ಟಿ ದೋಷ, ಇರುವವರು ಅಧಿಕ.  ಅದೆಷ್ಟೋ ಮಂದಿ ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಗಳು ಇದ್ದಾರೆ.  ಆದರೆ ಮಾನವನ ಸರಾಸರಿ ಆಯಸ್ಸನ್ನಪ್ರಹೊರತಾಗಿಹಾಗೂ ಮಾನವರ ದೈಹಿಕ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವಮಾನದ ದುಡಿಮೆಯಿಂದ ತಾನು ಗಳಿಸಿದ ಸಂಪತ್ತನ್ನು ಅನುಭವಿಸುವ ಸಾಧ್ಯತೆಗಾಗಿಯಾದರೂ, ಅಥವಾ ತನ್ನ ಮುಂದೆ ನಿಂತಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿರಾಮ ಜೀವನ ನಡೆಸಲು ೫೮ ಸೂಕ್ತ ನಿವೃತ್ತಿ ವಯಸ್ಸು ಎನ್ನಬಹುದು.

ಇದರಿಂದಾಗಿ ನವ ಪೀಳಿಗೆಗೆ ನೌಕರಿ ಹೆಚ್ಚು ದೊರಕುವ ಸಾಧ್ಯತೆ ಕೂಡ ಇದೆ ಹಾಗೆಯೇ
ಹೊಸ ಅನನುಭವಿ ವ್ಯಕ್ತಿಗಳಿಗೆ ಕೆಲಸ ನೀಡುವುದು ಸೂಕ್ತವಾಗಿದೆ ಎನಿಸುತ್ತದೆ. ನಿವೃತ್ತಿ ವಯಸ್ಸು ಏರಿದಷ್ಟು ಅನುಭವಕ್ಕೆ ತಕ್ಕಂತೆ ಪಗಾರದ ಹೆಚ್ಚಳವನ್ನು ಗಮನಿಸಿದಾಗ ಅದೇ ಒಬ್ಬರ ಪಗಾರಕ್ಕೆ ಹೊಸದಾಗಿ ಇಬ್ಬರು ಅಥವಾ ಮೂವರನ್ನು ನಿಭಾಯಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕೆಲವು ಸರ್ಕಾರದ ಡಿಪಾರ್ಟ್ಮೆಂಟ್ ಗಳಲ್ಲಿ ಸರ್ವಿಸ್‌ ಹೆಚ್ಚಿದ ಹಾಗೆ ಸೋಮಾರಿತನ ಮೈಗೂಡಿಸಿಕೊಂಡಿರುವವರು ಇದ್ದಾರೆ. ಸೇವಾವಧಿ ಇನ್ನೂ ಬಾಕಿ ಇದೆ ಎಂಬ ಕಾರಣಕ್ಕಾಗಿ ಕೇವಲ ಹಾಜರಾತಿಗಾಗಿ ಬಂದು ಹೋಗುವ ಹಾಗೂ ತನ್ನ ಅನುಭವವನ್ನು ಯುವಜನತೆಗೆ ಹಂಚಿಕೊಳ್ಳುವ ಮನಸ್ಸಿಲ್ಲದೇ ಇರುವ ಅದೆಷ್ಟೋ ವ್ಯಕ್ತಿಗಳು ಇದ್ದಾರೆ. 

ಅಷ್ಟಲ್ಲದೇ ಯುವಪೀಳಿಗೆಗಳಿಗೆ ನೌಕರಿ ಕೊಡುವ ಜವಾಬ್ದಾರಿ ಕೂಡ ಸರಕಾರದ ಹೊಣೆಗಾರಿಕೆ ಎನ್ನಬಹುದು. ಅನನುಭವಿ ಉದ್ಯೋಗಿ ಕೂಡ ಕೆಲಸ ನಿರ್ವಹಿಸುತ್ತಾ ಅನುಭವಿಯಾಗಬಲ್ಲ. ಅದು ಅವರವರ ಸಾಮರ್ಥ್ಯದ ಅನುಗುಣವಾಗಿ ಜಾಣ್ಮೆಯ ಅನುಗುಣವಾಗಿ ಕೆಲ ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಕೇವಲ ಅನುಭವವನ್ನು ಮಾನದಂಡವಾಗಿ ತೆಗೆದುಕೊಂಡಾಗ ಈ ರೀತಿಯ ಬೇಜವಾಬ್ದಾರಿ ವ್ಯಕ್ತಿಗಳನ್ನು ಕಾಣಬಹುದಾದ ಸಂಭವ ಇದೆ. 

ಆದರೆ ಇತ್ತೀಚೆಗೆ ನೌಕರರಿಗೆ ಕೊಡಬೇಕಾದ ಗ್ರಾಚ್ಯುಯಿಟಿ, ಪಿ ಎಪ್, ಇನ್ನಿತರ ಯಾವುದೇ ಹಣದ ಪೂರೈಕೆಯನ್ನು ತಡೆ ಹಿಡಿಯಲೆಂದೇ  ಕಂಡು ಕೊಂಡ ಹೊಸ ಮಾರ್ಗ ನಿವೃತ್ತಿ ವಯಸ್ಸಿನ ಏರಿಕೆ ಎಂಬುದು ನನ್ನ ಅಭಿಪ್ರಾಯ. ಆದರೆ ಇದರಿಂದ ನವ ಪೀಳಿಗೆಯ ದುಡಿಮೆಯ ಅವಧಿಯನ್ನು ನಾವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಅನುಭವದ ಆಧಾರದಲ್ಲಿ ಸೋಮಾರಿಯಾಗಿ ರೋಗಿಯಾಗಿ ನಿಶ್ಯಕ್ತಿಯಿಂದ ಬಳಲುವ ನೌಕರರಿಗೆ ಅನಾವಶ್ಯಕ ಸಂಬಳವನ್ನು ನೀಡುವುದು ಒಂದು ಕಡೆ. ಪದವಿ ಪಡೆದರೂ ಕೆಲಸ ದೊರಕದೇ ನಿರಾಸೆ ಹೊಂದಿ ಜೀವನೋತ್ಸಾವನ್ನೇ ಕಳೆದು ಕೊಳ್ಳುವ ಯುವ ಪೀಳಿಗೆ ಒಂದು ಕಡೆ.

ಆದರೆ ಯುವ ಪೀಳಿಗೆಗೆ ಕೆಲಸ ಸಿಕ್ಕೊಡನೆ ಹಿರಿಯರನ್ನು ಪೋಷಕರನ್ನು ಸಹೋದರ ಸಹೋದರಿಯರನ್ನು ನಿರ್ಲಕ್ಷಿಸಿ ತಾನಾಯಿತು ತನ್ನ ಮಡದಿ ಮಕ್ಕಳಾಯಿತು ಎನ್ನುವವರಿಗೂ ಕೊರತೆಯಿಲ್ಲ. ಅಯ್ಯೋ ತನ್ನ ಒಡಹುಟ್ಟಿದವರು ತನ್ನ ಪೋಷಕರು ಎಂದು ಮದುವೆ ಕೂಡ ಮಾಡಿಕೊಳ್ಳದೇ ಸಂಸಾರದ ಜವಾಬ್ದಾರಿ ಹೊತ್ತು ಸಾಗುವ ಸುಜನರಿಗೂ ಕೊರತೆಯಿಲ್ಲ. ಹಾಗೇ ತನ್ನ ಜೀವಮಾನದ ದುಡಿಮೆಯಿಂದ ಮನೆ ಕಟ್ಟಿ ಸಾಲ ಮಾಡಿ ಮಕ್ಕಳ ಮದುವೆ ಮಾಡಿ ನೆಮ್ಮದಿಯಿಂದ ಇರುವವರಿಗೂ ಕೊರತೆಯಿಲ್ಲ. ದುಡಿದುದೆಲ್ಲವನ್ನು ಚಟಗಳಿಗೆ ಕಟ್ಟಿ ಚಟ್ಟ ಕಟ್ಟಲೂ ಮಕ್ಕಳು ಪರದಾಡಬೇಕಾದ ಪರಿಸ್ಥಿತಿ ತಂದುಕೊಂಡಿರುವ ನಿವೃತ್ತ ನೌಕರರು ಕಡಿಮೆ ಏನಿಲ್ಲ.

ಇದೆಲ್ಲವನ್ನೂ ಗಮನಿಸಿದಾಗ ನಿವೃತ್ತಿ ವಯಸ್ಸನ್ನು ೫೮ಕ್ಕೆ ಇಳಿಸಿ ಯುವ ಪೀಳಿಗೆಯ ದುಡಿಮೆಗೆ ಅವಕಾಶ ಮಾಡಿಕೊಡುವುದು ಸೂಕ್ತ ಎನ್ನುವ ಭಾವನೆ ನನ್ನದು.

ಅದೆಷ್ಟೇ ಪ್ರತಿಷ್ಠಿತ ಸಂಸ್ಥೆಯಾಗಿದ್ದರೂ ಹಳೆ ಬೇರು ಹೊಸ ಚಿಗುರು ಎಂಬ ಆಧಾರದಲ್ಲಿ ಮಾನಸಿಕ ಆರೋಗ್ಯ ದೈಹಿಕ ಆರೋಗ್ಯ ಉತ್ತಮವಾಗಿರುವ ಹಿರಿಯ ನಿವೃತ್ತ ನೌಕರರಿಂದ ಹೊಸ ಅನನುಭವಿ ನೌಕರರಿಗೆ ತರಬೇತಿ ನೀಡುವ ಮೂಲಕ ಸಂಸ್ಥೆಯ ಏಳಿಗೆಗೆ, ಹೊಸ ನೌಕರರ ಅನುಭವದ ಹೆಚ್ಚಳಕ್ಕಾಗಿ ದುಡಿಯುವ ಹುಮ್ಮಸ್ಸು ಇರುವ ನಿವೃತ್ತ ನೌಕರರಿಗೆ ಆಧಾರವಾಗುವ ಉದ್ದೇಶ ಹೊಂದಿ ತಾತ್ಕಾಲಿಕ ಮರು ನೇಮಕ ಮಾಡಿಕೊಳ್ಳಬಹುದು.

ಇಷ್ಟರ ಹೊರತಾಗಿ ನಿವೃತ್ತಿ ವಯಸ್ಸನ್ನು ಏರಿಸುತ್ತಾ ಹೋಗುವುದರಿಂದ ಯಾರಿಗೂ ಉಪಯೋಗ ಇಲ್ಲ.  ಎಂಬ ಭಾವನೆಗಳು ನನ್ನದು.

ಧನ್ಯವಾದಗಳೊಂದಿಗೆ
ವೈಲೇಶ ಪಿ ಯೆಸ್ ಕೊಡಗು
೧೧/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು