ಹಿಮದಾಸ್ ಸಾಂಗ್

ಹಿಮದಾಸ್ ಸಾಂಗ್
~~~~~~~~~~~
ಪಿ ಟಿ ಉಷಾ ಮಿಲ್ಕಾ ಸಿಂಗ್
ಮಹಮ್ಮದ್ ಅನಾಸ್ ಕಿಂಗ್
ಇವರಿಗೆಲ್ಲಾ ಸಧ್ಯ ಸಣ್ಣ ಟಾಂಗ್
ಇದೀಗ ಹಿಮದಾಸ್ ಸಾಂಗ್

ಹಿಮ ಹೊದ್ದು ಮಲಗಿದ್ದ ಅಥ್ಲೆಟಿಕ್
ಹಿಮದಾಸ್' ರಿಂದ ದೊರಕಿದೆ ಕಿಕ್
ಹಿಂದಿನ ಓಟಕೆ ದೊರಕಲಿ ಚುಕ್'ಬುಕ್
ಹಿಮಾಲಯದ ಮೇರೆ ಮೀರಲಿ ಲಕ್

ಭಾರತ ದ್ವಜಕ್ಕಾಗಿ ಹುಡುಕಾಟ
ಸಿಕ್ಕೊಡನೆ ನೀಗಿತು ಮನದ ಸಂಕಟ
ಏರಲಿ ಕೀರುತಿ ಸಾಗರದಾಚೆಗೂ
ಇರಲಿ ಭಾರತಾಂಬೆಯ ಕರುಣೆಯೂ

ಜಾತಿಯ ಕಾಣದಿರಿ ಹುಚ್ಚಪ್ಪಗಳಿರಾ
ಎಳೆಯ ವಯಸ್ಸಿನ ಛಾತಿಯ ಕಂಡಿರಾ
ಬಡತನ ಸಿರಿತನ ಇಲ್ಲಿ ಮಿಗಿಲಲ್ಲ
ಸಾಧನೆಯ ಹಾದಿಗೆ ಕೊನೆಮಿಗಿಲಿಲ್ಲ

ಜಾತಿ ಮತದ ಕಿಲುಬು ಕಿತ್ತು
ಸಾಧನೆಗೆ ಗೌರವ ಸಲಾಮನಿತ್ತು
ಸಕಲವನು ಬದಿಗೊತ್ತಿ ನೆನೆಸಿರಿ
ಭಾರತಿ ಸುತೆ ಎಂಬುದ ಮರೆಯದಿರಿ

ವೈಲೇಶ ಪಿ ಯೆಸ್ ಕೊಡಗು
೧೭/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು