ಗಾಂಪರಿವರು
ಗಾಂಪರಿವರು
~~~~~~~~
ಗೋಮುಖವ್ಯಾಘ್ರಗಳೋ
ಗೋಸುಂಬೆಗಳೋ ಗೊಂದಲವೇ
ಗೂಡಾಗಿ ಮೂಡಿಸಿಹರು ಗೂಂಡಾಗಳ
ಸಂತತಿಯ ಗಾಂಪರಿವರೋ ಕಾಣದಾದದೆನು
ಸ್ವಾರ್ಥಕೆ ಸರ್ವಸ್ವವ ನೀಡಿ
ಎಂಜಲಿಗೆ ಕೈಚಾಚಿ ಬೆಂದ ಮನಕೆ
ನೋವನೇ ಬೆಸೆದು ಅಂದದಾ ಮಾತಿಂದ
ತಾನೇ ಹಿರಿಯನೆಂದು ಮೆರೆಯುವವರೋ
ಇವರಿಗಿಲ್ಲ ನ್ಯಾಯ
ಅನ್ಯಾಯದ ಅನ್ನವೇ ನೀತಿ
ತಿಂದುಂಡು ಇಲ್ಲದ ರೋಗವ ಕೊಂಡು
ಅರ್ಧಕೆ ನಡೆಯುವರು ಅಧರ್ಮವನುಂಡು
ತಾ ಗೈದ ಪಾಪಗಳ
ಏನರಿಯದವರ ತಲೆಗಿರಿಸಿ
ಜಗದೆದುರು ನಿಷ್ಪಾಪಿಯ ಶಿಲುಬೆಗೇರಿಸಿ
ಮಾಡದ ಪಾಪವ ಆಡಿ ಕೊಂಡೊಯ್ಯವರು
ವೈಲೇಶ ಪಿ ಯೆಸ್ ಕೊಡಗು
೧೩/೬/೨೦೧೮
Comments
Post a Comment