ದರ್ಪಣ

ದರ್ಪಣ
~~~~~
ನಮಗೂ ಸಾಕಾಗಿದೆ ಬೆಂದವರ ನರಳಾಟ ಕೇಳಿ
ನಾನೆಂಬ ಪೊಗರು ಅಹಂ ಹುಚ್ಚಾಟದ ಕೇಲಿ 
ನಾವೆಲ್ಲರೊಂದೇ ಎನಬೇಕಿದೆ ಪುಷ್ಪವರಳಿ
ಧನದಾಹಕೆ ಸಿಲುಕಿ ಕರಕಲಾಗದೇ ಮರಳಿ

ನೋವು ನಲಿವು ಮನುಜ ಸಹಜ ಗುಣ
ಆಸ್ತಿ ಪಾಸ್ತಿ ಧನ ಕನಕ ನಮ್ಮೆಲ್ಲರ ಹೆಣ
ಉಸಿರು ನಿಂತರೆ ಉಳಿವುದೊಂದೇ ಅಸ್ತಿ
ಅದನರಿಯದೇ ಬೆಳಿದಿವೆ ಆಸೆಗಳ ಸುಸ್ತಿ

ದವಾಖಾನೆಯ ಮಂಚಕಿದೆಯೇ ಜಾತಿ
ಸಕಲರು ಸೇವಿಪ ಗುಳಿಗೆಗಿದೆಯೇ ಧರ್ಮ
ಮಸೀದಿ ಮಂದಿರ ಇಗರ್ಜಿ ಏನಾದರೇನು
ಶವಯಾತ್ರೆಯಲಿ ಸಹಾಯ ಮಾಡುವದೇನು

ನಾವೇನ ಗೈದರೂ ಬದಲಿಸಲಾಗದ ಕರ್ಮ
ಬೇಲಿಯೇ ಎದ್ದು ಹೊಲ ಮೇಯುವ ಮರ್ಮ
ಆರಂಭ ಶೂರತನಕೆ ಬಿಡಲೇಬೇಕು ತರ್ಪಣ
ಬದುಕಾಗಲಿ ಎಮ್ಮ ತನವ ತಿಳಿಸುವ ದರ್ಪಣ

ವೈಲೇಶ ಪಿ ಯೆಸ್ ಕೊಡಗು
೨೨/೬/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು