ಧರೆ
ಧರೆ
~~
ನೀನೀದ ಕಲ್ಲು ಮಣ್ಣು ಖನಿಜಗಳ ಬಳಸಿ
ತರಿದು ಮರಗಳ ನೆಪಮಾತ್ರಕೆ ಗಿಡ ನೆಡಿಸಿ
ಮುನ್ಪೀಳಿಗೆಗೆ ಮಾದರಿಯಾಗದೇ ಅಳಿಸಿ
ಸುಳ್ಳು ಪೊಳ್ಳುಗಳ ಸರಮಾಲೆಯ ಪೋಣಿಸಿ
ಮನೆ ಮಠ ಮಂದಿರ ಮಸೀದಿಗಳ ನಿರ್ಮಿಸಿ
ಹೇಗೆ ಕಂಡರೂ ಒಂದೇ ಆದ ಮನಸುಗಳ
ನಡುವೆ ಜಾತಿ ಮತದ ಕಂದಕಗಳನು ಕೊರೆಸಿ
ಅಮ್ಮನೆಂದರಿಯದೇ ಮೈಗೆ ವಿಷವ ಬೆರೆಸಿ
ನಡೆದವರಿಗಾಗಿ ಎಳೆಯದೇ ಹೋದೆ ಗೆರೆ
ಪೂರ್ವದಲಿ ತುಂಬಿ ತುಳುಕಿದ ನಿನ್ನಾಸರೆ
ಇಂದು ಬತ್ತಿ ಹೋಯಿತೇ ನಿನ್ನ ಪ್ರೇಮದ ತೊರೆ
ಅಮ್ಮಾ...ನೀನೇ ಮುನಿದರೆ ನಮಗಾರು ಆಸರೆ
ಧರೆ ವಸುಂದರೆ ನಿನ್ನ ಕರುಣೆಗೆ ಸಾಟಿ ಯಾರೆ
ನಿನ್ನೊಡಲು ಶರದಿ ನಧ ನದಿ ಸರೋವರ ಕೆರೆ
ಮರಗಿಡ ಪಶು ಪಕ್ಷಿ ಅಖಂಡ ಪ್ರಾಣಿಗಳಿಗಿರೆ
ಅದರೊಳು ನಾವು ಇವೆಲ್ಲವನು ಬಳಸಿರೆ
ನಮಗೆಂದೇ ನೀ ತಂದ ಅನ್ನದ ಅಗುಳಿರದಿರೆ
ಎಲ್ಲಿಯ ನಾವು ಮತ್ತೆಲ್ಲಿ ಅಹಂ ನೀನಿರದಿರೆ
ಜಗದ ಸಕಲಕೂ ಭೂಮಿ ಕಾರಣವಾಗಿರೆ
ಛೀ ಮಣ್ಣೆಂದವಗೂ ನೀನೇ ಕೊನೆಯಾಸರೆ
ವೈಲೇಶ ಪಿ ಯೆಸ್ ಕೊಡಗು
೭/೬/೨೦೧೮
Comments
Post a Comment