ಈಶಣ್ಣ ಇವರ ಕವನದ ವಿಮರ್ಶೆ
ಕಾವ್ಯ ಸ್ಪಂದನ ಸ್ಪರ್ಧೆಗಾಗಿ
*ಮುನಿಯ ಬೇಡವೇ ತಾಯಿ*
ಜಕ್ಕನ ಹಳ್ಳಿ ಈಶಣ್ಣ ಇವರ ಕವನದ ವಿಮರ್ಶೆ
ನವ ಮಾಸದೊಳು ಹೊತ್ತ ತಾಯಿ
ದ್ವಿಮಾಸದೊಳು ನಿನಗೆ ಕಾಣುತ್ತಿಲ್ಲವೆಂದು
ಮುನಿಸೇಕೆ ತಾಯಿ ಮುನಿಸೇಕೆ
ನಿನ್ನೊಬ್ಬವಳನ್ನೇ ಬಿಟ್ಟು
ಬಹುದೂರ ಬಂದಿರುವೆ ತಾಯಿ
ಇರುವುದು ದೂರವಾದರೇನಂತೆ
ನನ್ನ ಮನವು ಕ್ಷಣ ಕ್ಷಣವೂ
ನಿನ್ನ ದ್ಯಾನಿಸುತ್ತಿದೆ
ಹೀಗಿರುವಾಗಲೂ ಮುನಿಸೇಕೆ
ತಾಯಿ ಮುನಿಸೇಕೆ
ಇರುವ ಸ್ಥಳದಲ್ಲಿ ನಾ ಸುಖವಾಗಿರುವೆ
ನೀ ಕೊಟ್ಟ ಹರಳೆಣ್ಣೆಯ
ದಿನ ದಿನವೂ ಹಚ್ಚುತ್ತಿರುವೆ
ನನ್ನ ತಲೆಯ ತಂಪು ಮಾಡಿದವಳೇ
ನಿನ್ನ ನೋಡಲು ಬರಲಾಗುತ್ತಿಲ್ಲ
ಮನ್ನಿಸೆನ್ನನು ತಾಯಿ
ಮನ್ನಿಸೆನ್ನನು
ಜಕ್ಕನ ಹಳ್ಳಿ ಈಶಣ್ಣ ಇವರು ಕರ್ತವ್ಯದ ಕರೆಗೆ ಓಗೊಟ್ಟು ಹೆತ್ತಮ್ಮನನ್ನು ಊರಿನಲ್ಲಿ ಬಿಟ್ಟು ಎರಡು ತಿಂಗಳಾದರೂ ಅಮ್ಮನನ್ನು ಕಾಣದೇ ಚಡಪಡಿಸಿದಂತಿದೆ.
ಭಾವ ಭವ್ಯವಾಗಿದೆ ನಿರೂಪಣೆ ಜಾಳಾಗಿದೆ ಎನಿಸಿತು
ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆ ಇರಲಿ.
ನೀವು ಬರೆದುದು ಸರಿಯಾಗಿದೆ.
ಅದ ಸ್ವಲ್ಪವಷ್ಟೇ ತಿದ್ದಿದೆ.
ಮುಂದೆ ಗಮನಿಸಿ ಬರೆದರೆ ಉತ್ತಮ ಕವಿಯಾಗಬಲ್ಲಿರಿ. ನಿಮ್ಮ ಬರಹ ಎಲ್ಲರಿಗೂ ತಲುಪಿ ಹೆಸರಾಗಲಿ.
ಆದರೆ ಹೀಗೆ ಬರೆಯಬಹುದಿತ್ತೆ ಎನಿಸಿತು.
*ನವಮಾಸ ಉದರದೊಳು
ಹೊತ್ತಮ್ಮನೇ ದ್ವಿಮಾಸದಲಿ
ನಿನ್ನ ನಾ ಕಾಣ ಬರಲಿಲ್ಲ..
ಮುನಿಯದಿರು ನನ್ನವ್ವಾ...*
ಎರಡನೇ ಚರಣದ ಮೊದಲ ಸಾಲು ಗಮನಿಸಿ ನಿನ್ನೊಬ್ಬವಳನೇ ಅಗತ್ಯವಿದೆಯೇ *ನಿನ್ನೊಬ್ಬಳನೇ* ಸಾಕಿತ್ತಲ್ಲವೇ?.
ಮುಂದುವರೆದು
ನೀನಿತ್ತ ಹರಳೆಣ್ಣೆ ತಂಪು ಗೈದಿದೆ ಶಿರವ
ನಿನ್ನ ನೆನಪ ಹೊರತು ನನಗಿಲ್ಲಿ ಚಿಂತಿಲ್ಲ
ನಿನ್ನ ಹರಕೆಯಂತೆ ನಾನಿರುವೆ
ನಿನ್ನ ಕಾಣುವ ಬಯಕೆ ಹೊತ್ತಿರುವೆ
ಮುನಿಸು ತೊರೆಯೇ ಅಮ್ಮಾ.....
*ಜಕ್ಕನಹಳ್ಳಿ ಈಶಣ್ಣ*
Comments
Post a Comment