ಶೋಕಕಾರಕ

ಶೋಕಕಾರಕ
~~~~~~~
ಗಡಿಯ ಗುಡಿಯಲಿ ರಕ್ತಪಾತ
ಸಿಯಾಚಿನ್ ಎದೆಯಲಿ ಹಿಮಪಾತ
ಕಾಶ್ಮೀರದ ಗುಂಡಿಗೆಯಲಿ ಗುಂಡಿನೇಟು
ಭಾರತೀಯ ಪ್ರಜೆಯ ಪ್ರಜ್ಞೆಗೆ ಛಡಿಯೇಟು

ಯೋಧನೆದೆಯೊಳು ತವರಿನ ತವಕ
ಯೋಧನ ಮಡದಿಯ ಮನದಿ ನಡುಕ
ಯೋಜನೆಯ ಮಾತಿನ ಮಾರಣಹೋಮ
ಯೋಚಿಸದ ಹಾದಿಯಲಿ ಅಳಿಯಿತು ಕಾಮ

ಸತಿ ಸುತರ ಜೊತೆ ಬಾಳಬೇಕಿತ್ತು
ಸಕಲ ಕಾರ್ಯಕೂ ನೀನಿರಬೇಕಿತ್ತು
ಸಲಹಿದವರ ಜತನದಿ ಪೊರೆಯಬೇಕಿತ್ತು
ಸಮಯವರಿಯದ ಸಾವು ಬರಬಾರದಿತ್ತು

ಯುದ್ಧ ಮನುಜ ಕುಲ ವಿನಾಶಕ
ದ್ವಿ ಪಕ್ಷದ ಸಕಲರಿಗೂ ಶೋಕಕಾರಕ
ಮನಗಂಡಿದ್ದರು ಸಾಮ್ರಾಟ್ ಅಶೋಕ
ಅರಿಯದೇ ಮುಂದುವರಿಸುವೆವು ನಾವ್ಯಾಕ

ವೈಲೇಶ ಪಿ ಯೆಸ್ ಕೊಡಗು
೧೯/೬/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು