ಜನುಮದ ರಾಗ
ಜನುಮದ ರಾಗ
```````````````````
ನಾವೊಂದು ಕಲ್ಲಿನ ಭರ್ಜರಿ ಗೋಡೆ
ನಮಗೆ ನೀವೇನ ಎಸೆದಿರೋ ನೋಡೆ
ಕೋಪದ ಭರದಲಿ ನೀವೇ ಎಸೆದಿರಿ ಕಲ್ಲು
ಬಳಿಕ ನಾವೇ ತಲೆಯ ಒಡೆದೆವೆಂಬ ಗುಲ್ಲು
ಮಧ ಮತ್ಸರವೆಂಬ ಈರ್ಷ್ಯೆಗೆ ಸಿಲುಕಿ
ಬಲು ರಭಸದಲಿ ರಬ್ಬರ್ ಚೆಂಡು ಬಿಸಾಕಿ
ತಪ್ಪಿಸಿಕೊಳುವ ಮೊದಲೇ ನಿಮಗದು ತಾಕಿ
ಉರಿ ಉರಿಯೆಂದು ಕುಣಿದಾಡಿದಿರಿ ಕೂಗ್ಹಾಕಿ
ಮನವರಳಿ ನಗುವ ಸುಮವ ತೂರಿದಿರಿ
ಹೂವಿನೇಟಿಗೆ ನೋವುದೇ ಎಂದುಕೊಂಡಿರಿ
ಮೃದು ಮಧುರ ಹೂವದು ಪ್ರೀತಿಯಲಿ ಸವರಿ
ತಮ್ಮ ಪಾದಚರಣದಲಿ ಪಾವನವಾಗಿದೆ ಕೇಳಿರಿ
ಮನುಜ ಮನದೊಳಗೆ ಭಾವವದು ಮೂಡಿ
ನೀಡಿ ಪಡೆವ ನುಡಿಯು ಅರಳಿಸಿತೇ ಮೋಡಿ
ಜನುಮ ಜನುಮಕೂ ಇದೇ ರಾಗವನು ಪಾಡಿ
ನೀವೇನ ನೀಡಿದಿರೋ ಅದೇ ಮರಳಿದೆ ನೋಡಿ
ವೈಲೇಶ ಪಿ ಯೆಸ್ ಕೊಡಗು
೨೨/೬/೨೦೧೮
Comments
Post a Comment