ಗಝಲ್ : ೩೫
ಗಝಲ್ : ೩೫
`````````````````
ಯುದ್ದರಂಗದಲೂ ಅಂತರಂಗದ ನೋವು ಕಾಡುತಿದೆ ಸಾಕಿ.
ಮನದಂತರಾಳದಲೂ ದಂಡಿನಾಕ್ರಮಣ ನಡೆಯುತಿದೆ ಸಾಕಿ.
ತಿಂಗಳೊಳು ಮರಳಿ ಬರುವೆನೆಂಬುದರ ಸಾಧ್ಯತೆಯ ಅರಿವಿಲ್ಲ
ಕ್ಷಣ ಕ್ಷಣವೂ ಮನ ಮನೆಯ ಮನೆಯವರ ನೆನಪಿಸುತಿದೆ ಸಾಕಿ
ಅರಿವುಗೇಡಿಯಾದೆನೇ ಅರಿಯೆದುರು ಛೆ ಅವರಿವರಂದೇನು ಫಲ
ಮನದ ದುಗುಡವ ದೂಡಲಾಗದೇ ಸಾವು ಸಮೀಪಿಸಿತೆನಿದೆ ಸಾಕಿ
ದಂಡಿನೊಳಗೊಂದು ದಂಡವಾಗಿಹೆನಿಂದು ದಂಡನೆಗೆ ಅರ್ಹನು ನಾ
ಅಂಡ ಪಿಂಡ ಬ್ರಹ್ಮಾಂಡದೊಳು ಉದ್ಧಂಡನಿಗೆ ಗೆಲುವಾಗುತಿದೆ ಸಾಕಿ
ಮಧುರಸದ ಪಾತ್ರೆಯಲಿ ನನ್ನ ಶವ ಯಾತ್ರೆ ಗೋಚರಿಸಿ ಕನವರಿಸಿದೆ.
ಬವಣೆಯ ಭಾರವ ವ್ಯರ್ಥವಾಗಿ ಶಿರದೊಳಿರಿಸಬಾರದಿತ್ತೆನಿಸಿದೆ ಸಾಕಿ
"ಸಿಡಿಲು"ನ ದುಡಿಮೆಯಲಿ ಏಕಾಗ್ರತೆಯು ಎಂದೆಂದಿಗೂ ನಗುತಿರಲಿ
ಸಂಸಾರ ಜೂಜಾಟದ ಮೆಲುಕು ಮುಲುಕುಗಳಿಗೆ ಸಮಯವಿದೆ ಸಾಕಿ
ವೈಲೇಶ ಪಿ ಯೆಸ್ ಕೊಡಗು
೧೯/೬/೨೦೧೮
Comments
Post a Comment