ಜೀವದ ತವರು
ಜೀವದ ತವರು
~~~~~~~~
ಅಮ್ಮ ನಮಗೆ ನಿಜದೈವ
ಅಪ್ಪನಿಗೆ ನಾವೆಂದರೆ ಜೀವ
ಅಪ್ಪನೆಂದರೆ ಕುಟುಂಬದ ಭಾವನೆ
ಅವರಿಂದಲೇ ಕಳೆವುದು ನಮ್ಮೆಲ್ಲರ ಬವಣೆ
ಅಮ್ಮ ಒಂಬತ್ತು ತಿಂಗಳು ಹೊತ್ತು
ಹೆತ್ತು ಕಲಿಸಿ ಕುಣಿಸಿ ಮಮತೆಯಾದಳು.
ಅಪ್ಪನಿಗೆ ಅರಿವೇ ಇಲ್ಲವೇನೋ ಎಂಬಂತೆ
ಕಿವಿ ಕಚ್ಚಿ ಮನವ ಚುಚ್ಚಿ ಹಿರಿ ಹಿರಿ ಹಿಗ್ಗಿದವಳು
ಅಪ್ಪನ ಶಿರದೊಳ ಹೆಜ್ಜೆ ಹೆಜ್ಜೆಯಲೂ ನಾವೇ
ನಮಗಾಗಿಯೇ ಅವರ ಸ್ವ ಬಯಕೆಗಳಿಗೆ ಸಾವೇ
ನಮಗೆಂದೇ ಮಿಡಿವ ಮೃದುಲ ಮನವ ಕಾಡಿದೆವೆ?
ಅವರದೇ ದುಡಿಮೆಯಲಿ ಚಲಿಸಿದೆ ಸಂಸಾರದ ನಾವೆ
ಅಪ್ಪನೆದುರು ನಾವೊಂದು ಪುಟ್ಟ ಚಿಗುರು
ಅಪ್ಪನ ನುಡಿಗಳು ನಮಗಾಗದಿರಲಿ ಒಗರು
ನಮಗಾಗಿ ಎಷ್ಟೊಂದು ಹರಿಸಿರಬೇಕು ಬೆವರು
ಅವರೇ ನಮ್ಮ ಜೀವ ಜೀವನದ ತವರು ದೇವರು
ವೈಲೇಶ ಪಿ ಯೆಸ್ ಕೊಡಗು
೧೭/೬/೨೦೧೮
Comments
Post a Comment