ಕರವ ಮುಗಿವೆನು
ಕರವ ಮುಗಿವೆನು
~~~~~~~~~
ಚೋರರು ಬಂದರೋ ಕದಿಯಲೆಂದು
ಮನದ ಅವಗುಣಗಳ ಕೊಂದು ನಡೆದರು
ನಿಜವನರಿಯದ ಜನರು ಬರಿದೇ ನುಡಿದು
ಜನುಮದ ಸೋಲುಗಳ ಸೆಳೆದು ಹೋದರು
ನಿಂದಿಸಿ ಹಂಗಿಸಿ ಕಂದಿಸ ಹೊರಟವರು
ಸಂದುಗೊಂದುಗಳಲಿ ಅಡಗಿ ನುಡಿದಿಹರು
ಅರೆ ಇವನ ನಾವೇನೇ ಬಿಂಬಿಸಿದರೂ
ಸಂಕಟಕೆ ಸಿಲುಕಲಾರದೇ ಹೋದನೆಂದರು
ತಮಗೆ ತಾವೇ ಇವನು ಅರಿ ಎಂದಕೊಂಡವರು
ಆಯುಧಗಳ ಝಳಪಿಸಿ ತರಿಯೆ ನಿಂದವರು
ತಾವರಿಯದೇ ಇಂದು ಒಳಿತನೇ ಎಣಿಸಿಹರು
ನಾನೆಂದೂ ಸರಿದಾರಿಯಲಿ ನಡೆವಂತೆ ಕಾದಿಹರು
ನನವ್ವ ಭೂದೇವಿ ಒಡಲ ತುಂಬಾ ಬಾಳ ತಿಳಿವನು ಕಲಿಸುವವರೇ ಕನವರಿಸಿ ಕಾಯುತಿಹರು
ಕಲಿಸುವ ಕಲಿಗಳು ಕರಪಿಡಿಯೆ ಕಾದಿರಲು
ಕಲಿಕಾರ್ಥಿಯಾಗಿ ದೇನಿಸಿ ಕರವ ಮುಗಿವೆನು.
ವೈಲೇಶ ಪಿ ಯೆಸ್ ಕೊಡಗು
೧೬/೬/೨೦೧೮
Comments
Post a Comment