ವೀಡಿಯೋ ಗಮನಿಸಿ

ವೀಡಿಯೋ ಗಮನಿಸಿ
~~~~~~~~~~~  

       ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಮರಣ ಅಥವಾ ಕೈಕಾಲುಗಳಿಗೆ ಜಖಂ ಮಾಡಿಕೊಂಡು ಲಕ್ಷಾಂತರ ಹಣವನ್ನು ಖರ್ಚು ಮಾಡಿ ಆರೋಗ್ಯ ಕೂಡ ಹದಗೆಟ್ಟು ನೋವು ಅನುಭವಿಸುವ ಅನೇಕರನ್ನು ನಾವು ಕಾಣುತ್ತೇವೆ.           

         ಅದರಲ್ಲೂ ಬೆಂಗಳೂರು ಮೈಸೂರು ಬೆಳಗಾವಿ ಮುಂಬಯಿಯಂತಹ ಮಹಾನಗರದ ಟ್ರಾಫಿಕ್ ಸಿಗ್ನಲ್'ಗಳ ಬಳಿ ಹೆಚ್ಚಿನ ಅಪಘಾತಗಳು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಬೇಗ ಅಪಘಾತಕ್ಕೆ ಈಡಾಗುವುದು ಸಹಜ. ಅಪಘಾತಕ್ಕೆ ಒಳಗಾದವರ ಕಡೆಯವರು ಚಾಲಕರನ್ನು ನಿಂದಿಸುವುದು. ಹಲ್ಲೆ ಮಾಡಿ ನಂತರ ಕಷ್ಟಗಳನ್ನು ಅನುಭವಿಸುವುದು ಇವೆಲ್ಲವೂ ಬೇಕಿಲ್ಲ. ಅಪಘಾತದಲ್ಲಿ ನೋವುಂಡು ನಂತರ ಕಾರಣರಾದ ಭಾರಿ ವಾಹನಗಳ ಚಾಲಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು ಪರಿಹಾರ ಇವೆಲ್ಲವೂ ಸಹಜ ಪ್ರಕ್ರಿಯೆಗಳು. ಆದರೆ ಕಳೆದುಕೊಂಡ ಸಮಯ ಹಣ ಆರೋಗ್ಯ ಇದಾವುದು ಮರಳಿ ಬಾರದು. ಹಾಗಾದರೆ ಇದಕ್ಕೆ ಪರಿಹಾರ ಏನು. ಪರಿಹಾರ ಇದೆ.

ಅದಕ್ಕಿಂತ ಮೊದಲು ನಾವೆಲ್ಲರೂ ಕೆಲವು ವಿಚಾರಗಳನ್ನು ಆರೋಗ್ಯಕರ ಅಭ್ಯಾಸಗಳ ಮುಖಾಂತರ ಪರಿಹಾರ ಮಾಡಿಕೊಳ್ಳಲು ಮನಸ್ಸು ಮಾಡಬೇಕಾದ ಅಗತ್ಯವಿದೆ. ಎದುರಿನ ವಾಹನಗಳ ಚಾಲಕರನ್ನು ಅನಗತ್ಯ ನಿಂದಿಸದಿರಿ. ಕೈ ಬಾಯಿ ತೋರಿಸಿ ಅವರನ್ನು ಅವಮಾನಿಸಿ ಹೋಗಿ ಆಯಾ ತಪ್ಪಿ ಅದೇ ವಾಹನಗಳ ಚಕ್ರದಡಿಗೆ ಬೀಳದಿರಿ. ನಮ್ಮ ವಾಹನದ ಸಾಮರ್ಥ್ಯದ ಅರಿವಿನ ಜೊತೆಗೆ ನಮ್ಮ ವಾಹನ ಚಾಲನಾ ಸಾಮರ್ಥ್ಯದ ಅರಿವು ನಮಗಿರಲಿ.  

ಸರಿಯಾದ ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕಿದೆ. ಸಂಚಾರಿ ನಿಯಮಗಳು ಉಲ್ಲಂಘನೆ ಮಾಡಲೆಂದು ರಚಿಸಿರುವುದಲ್ಲ. ಅಥವಾ ನಮಗೆ ದಂಡ ಸಂಗ್ರಹಿಸಲೆಂದು ಕಾನೂನಿನ ರಚನೆ ಮಾಡಿರುವುದಿಲ್ಲ. ಆದರೆ ಎಲ್ಲಾ ರೀತಿಯ ಸಂರಕ್ಷಣಾ ವಿಧಾನ ಕೂಡ ಸಂಚಾರಿ ನಿಯಮಗಳಲ್ಲಿ ಅಡಗಿಲ್ಲ. ಕ ರಾ ರ ಸಾ ಸಂಸ್ಥೆ ಇಲ್ಲಿ ದ್ವಿಚಕ್ರ ಸವಾರರನ್ನು ಎಚ್ಚರಗೊಳಿಸುವ ಉದ್ದೇಶ ಹೊಂದಿ ಒಂದು ವೀಡಿಯೋ ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ದ್ವಿಚಕ್ರ ಚಾಲಕರು ತಪ್ಪದೇ ನೋಡಿ ಅನುಸರಿಸಿ.  ಸಾರ್ವಜನಿಕರ ಆಸ್ತಿ ಪಾಸ್ತಿ ಆರೋಗ್ಯ ಸಮಯ ಇವೆಲ್ಲದರ ಹಿತರಕ್ಷಣೆಯ ದೃಷ್ಟಿಯಿಂದ ಈ ವಿಚಾರವನ್ನು ತಮ್ಮ ಮುಂದೆ ಇರಿಸಿದ್ದೇನೆ ಧನ್ಯವಾದಗಳು

ವೈಲೇಶ ಪಿ ಯೆಸ್ ಕೊಡಗು
೨/೬/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು