ಅಮ್ಮ ನಿಮಗಾಗಿ

ಅಮ್ಮ ನಿಮಗಾಗಿ ತೆರೆಯುವ ಮುನ್ನ
ಮನದಾಳದ ಮಾತುಗಳು.

ಜನ್ಮ ನೀಡಿದ ಅಪ್ಪ ಅಮ್ಮನಿಗೆ ವಂದಿಸುತಾ
ಮೊದಲಿಗೆ ಗಣಪನಿಗೆ, ನಮ್ಮ ಕುಲದೇವರಾದ ಶ್ರೀ ಸಿಡಿಲು ಬೊಮ್ಮಲಿಂಗೇಶ್ವರ ದೇವ ಹಾಗೂ ಮಾತೋ ಶ್ರೀ ಮಂಚಮ್ಮದೇವಿಯರಿಗೆ ಮತ್ತು ಕೊಡಗಿನ ಕುಲದೇವತೆ ಮಾತೆ ಶ್ರೀ ಕಾವೇರಮ್ಮನಿಗೆ ವಂದಿಸುತಾ

ನಿಜವಾಗಿಯೂ ಈ ದಿನ ನನಗೆ ಬಲು ಮಹತ್ವದ ದಿನ ಎನ್ನಬಹುದು. ಎಳವೆಯಲ್ಲಿ ಕಲಿಯುವ ಬಯಕೆ ಮನದುಂಬಿದ್ದರೂ ಅವಕಾಶ ಅನುಕೂಲ ಇಲ್ಲದೆ ಶಾಲೆ ಬಿಟ್ಟು ದುಡಿದು ಬದುಕುವ ಅನಿವಾರ್ಯತೆ ಇತ್ತು. ಹಾಗಾಗಿ ಎಂಟನೇ ತರಗತಿಯ ಎರಡನೇ ತಿಂಗಳ ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಹೊಟ್ಟೆ ಹೊರೆಯಲು ಊರು ಬಿಟ್ಟು ಪರ ಜಿಲ್ಲೆಯ ಪಟ್ಟಣದಲ್ಲಿ ಕೆಲಸ ಹುಡುಕುವ ನಡುವೆ ಒಬ್ಬ ಪುಣ್ಯಾತ್ಮ ಓದು ನಿಲ್ಲಿಸಿದ ಕಾರಣ ಕೇಳಿದರು. ಇದ್ದ ವಿಚಾರಗಳನ್ನು ತಿಳಿಸಿದೆ ಮುಂದುವರಿಸಿದ ಅವರು ಶಾಲೆ ಬಿಟ್ಟರೆ ಏನಾಯಿತು ಓದು ಬಿಡಬೇಡವೆಂದು ತಿಳಿಸಿದರು. ನನಗೆ ಅರ್ಥವಾಗಲಿಲ್ಲ.

ಅದಕ್ಕೆ ಅವರೆಂದರು ಪುಸ್ತಕವನ್ನು ಮೊದಲ ಗೆಳೆಯನನ್ನಾಗಿ ಮಾಡಿಕೋ ಅದಕ್ಕಿಂತ ಉತ್ತಮ ಗೆಳೆಯರಿಲ್ಲ. ಯಾವತ್ತೂ ಅದರ ಜೊತೆಗೆ ಇರಬೇಕೆಂದು ನಿನ್ನನ್ನು ಕೇಳುವುದಿಲ್ಲ. ನಿನ್ನ ಸಮಯಾನುಸಾರ ಓದಬಹುದು. ಬೇಡವೆಂದು ಮಡಿಚಿಟ್ಟರೆ ಬೇಸರ ಮಾಡಿಕೊಳ್ಳದೆ ಇರುವಂತಹ ಏಕೈಕ ಗೆಳೆಯ ಪುಸ್ತಕ ಎಂದರು. ಅದುವರೆಗೆ ಕೇವಲ ಚಂದಮಾಮ ಬೊಂಬೆಮನೆ ಪುಸ್ತಕ ಓದುತ್ತಿದ್ದವನು ಎಲ್ಲಾ ರೀತಿಯ ವಾರದ ತಿಂಗಳ ದಿನದ ನಿಯತಕಾಲಿಕೆಗಳನ್ನು ಓದಲಾರಂಭಿಸಿದೆ.

ಕೆಲಸದ ಸಮಯ ಮುಗಿದು ವಿರಾಮ ಸಿಕ್ಕರೆ ಕೈಯಲ್ಲಿ ಪುಸ್ತಕ ಹಿಡಿದಿರುತಿದ್ದೆ. ಹಾದಿಯಲ್ಲಿ ಬಿದ್ದ ಕಾಗದದ ತುಂಡಾದರೂ ಸರಿಯೇ ಓದಲು ವಿಚಾರ ಸಿಕ್ಕರೆ ಸಾಕು ಎನ್ನುವಂತೆ‌ ಓದುತಿದ್ದೆ. ಕ್ರಮೇಣ ಈ ಹುಚ್ಚು ಗ್ರಂಥಾಲಯಕ್ಕೆ ಎಡತಾಕುವಂತೆ ಮಾಡಿತು. ಆದರೆ ಇಂತಹ ಸಾಹಿತ್ಯವೇ ಬೇಕೆಂದು ಇರಲಿಲ್ಲ ದೊಡ್ಡ ದೊಡ್ಡ ಸಾಹಿತಿಗಳ ಪುಸ್ತಕ ಓದಲಿಲ್ಲ ನಿಯತಕಾಲಿಕೆಗಳಿಗೆ ಮೊದಲ ಆಧ್ಯತೆ. ಪತ್ತೆದಾರಿ ಕಾದಂಬರಿಗಳನ್ನು ತುಂಬಾ ಇಷ್ಟ ಪಡುತ್ತಿದ್ದೆ ಸಾಂಸಾರಿಕ ಕಾದಂಬರಿ ಕಥೆ ಪುಸ್ತಕ ಮಕ್ಕಳ ಸಾಹಿತ್ಯದ ಪುಸ್ತಕ ಎಲ್ಲವನ್ನೂ ಓದುತಿದ್ದೆ. 

ಇತ್ತೀಚಿನವರೆಗೂ ಓದುವುದೇ ಕೆಲಸವಾಗಿತ್ತು. ಬರೆಯುವ ಪ್ರಯತ್ನ ಮಾಡಿದರೂ ಕೈ ಬರಹ ಚೆನ್ನಾಗಿಲ್ಲವೆಂದು ತಿಳಿದು ಬರೆದರೂ ಯಾರಿಗೂ ತೋರಿಸುವ ಸಾಹಸ ಮಾಡಿರಲಿಲ್ಲ. ಹೊಸ ಹೊಸ ಗೆಳೆಯರು ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸಿದಾಗ ಸಂತಸ ಎನಿಸಿತು ಬರೆಯಬೇಕೆಂಬ ಉತ್ಸಾಹ ಕಾಣಿಸಿಕೊಂಡಿತು.ಹಾಗೆ ಬರೆದ ಕವನಗಳನ್ನು ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸುವ ಪ್ರಯತ್ನ ಇದಾಗಿದೆ ಸ್ನೇಹಿತರೇ.

ನನ್ನ ಕವಿಗೋಷ್ಟಿಯ ತವರು ರಾಣಿಬೆನ್ನೂರಿನ "ಉಷಾ ಸಿ. ಯತ್ನಳ್ಳಿ ಸದ್ಭಾವನಾ ವೇದಿಕೆ" ಯ ಎಲ್ಲಾ ನಿರ್ಮಾತೃಗಳಿಗೂ ಪುಸ್ತಕ ಓದಿ ಎಂದ ಗುರುಗಳು ಆದ ಪ್ರಕಾಶ್ ಅಂಬರ್ಕರ್, ಉಷಕ್ಕ, ವಿಶ್ರಾಂತ ಪ್ರೊಫೆಸರ್ ಯತ್ನಳ್ಳಿ ಸರ್, ಗೆಳೆಯ ಮಹಮ್ಮದ್ ಸರ್ವರ್, ಆತ್ಮೀಯ ಕುಟುಂಬ ಮಿತ್ರರಾದ ವೆಂಕಟ ರೆಡ್ಡಿ ಪುಟ್ಟಪ್ಪನವರ ಕುಟುಂಬದ ಎಲ್ಲಾ ಸದಸ್ಯರಿಗೂ. ಸಹೋದರಿ ರೇಖಾ ಕೊಟ್ಟೂರು, ಮೊದಲ ಬೇಟಿಯಲ್ಲಿ ಮನ ಸೆಳೆದ ಹಿರಿಯಣ್ಣ ಬೀದರಿನ ಅಪ್ಪಾಜಿ ಖ್ಯಾತಿಯ ಎಂ ಜಿ ದೇಶಪಾಂಡೆಯವರಿಗೆ, ಒಂದು ಸಾಲದೆಂದು ಎರಡು ಬಿರುದನಿತ್ತು ಸನ್ಮಾನಿಸಿ ಆತ್ಮ ಸ್ಥೈರ್ಯ ಹೆಚ್ಚಿಸಿದ ದೇಶಪಾಂಡೆ ಸಾಹಿತ್ಯಕ ಸಾಂಸ್ಕೃತಿಕ ಪ್ರತಿಷ್ಠಾನ (ರಿ)  ಬೀದರ್'ನ ಆಡಳಿತ ವರ್ಗದ ಸಕಲರಿಗೂ ಹಾಗೂ ಅಂದಿನಿಂದ ಇಂದಿನವರೆಗೂ ನನ್ನ ಹಿತ ಬಯಸುವ ಅಖಂಡ ಗೆಳೆಯ ವೃಂದಕ್ಕೆ ನಮಿಸುವೆ. 

ಎಲ್ಲಾ ರೀತಿಯ ಅವಕಾಶವನ್ನು ಒದಗಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಸಾಗರ್ ಹಾಗೂ ಶ್ರೀಮತಿ ಸುನೀತಾ ಸಾಗರ್ ಅವರಿಗೂ ಹಾಗೂ ವಿರಾಜಪೇಟೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಧೋಶ್ ಪೂವಯ್ಯ ಹಾಗೂ ಶ್ರೀಮತಿ ರೇವತಿ ಪೂವಯ್ಯನವರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ಡಾ|| ಸುಭಾಷ್ ನಾಣಯ್ಯನವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕೊಡಗಿನಲ್ಲಿ ಮೊಟ್ಟಮೊದಲ ಬಾರಿಗೆ ನನ್ನನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ಹಿರಿಯರಾದ ಶ್ರೀ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮತ್ತು ಶ್ರೀಮತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಹಾಗೂ ನನ್ನ ಸಾಹಿತ್ಯವನ್ನು ತಿದ್ದಿ ತೀಡಿದ ಕೊಡಗಿನ ಹಿರಿಯ ಕವಿಮಿತ್ರರಾದ ಗಿರೀಶ್ ಕಿಗ್ಗಾಲು ಇವರಿಗೂ ಕೂಡ ನನ್ನ ನಮನಗಳು. ನನ್ನೊಂದಿಗೆ ಹೆಗಲಾಗಿ ನಿಂತು "ಕೊಡಗು ಸಾಹಿತ್ಯಾಸಕ್ತರ ಕೂಟ" ವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮುಖಾಂತರ ನನ್ನ ಸಾಹಿತ್ಯ ಬೆಳವಣಿಗೆಗೆ ಸಹಕರಿಸಿದ ಕೌಸಲ್ಯ ಕೊಡಗು, ಗೆಳೆಯ ಟೋಮಿ ಥೋಮಸ್  ಅಖಂಡ ಕೊಡಗಿನ ಸವಿಮನದ ಎಲ್ಲಾ ಕವಿಮಿತ್ರರಿಗೂ ನನ್ನ ಅನಂತ ನಮನಗಳು

ನನ್ನ ಕವನಗಳನ್ನು ಪ್ರಕಟಿಸುವ ಜೊತೆಗೆ ನನ್ನನ್ನು ಕೊಡಗಿನ ಜನತೆಗೆ ವಿಶೇಷವಾಗಿ ಪರಿಚಯಿಸಿ ಪ್ಪ್ರೋತ್ಸಾಹಿಸಿದ ಕೊಡಗಿನ ಪ್ರಮುಖ ಪ್ರಖ್ಯಾತ ಶಕ್ತಿ ಪತ್ರಿಕೆಯ ಸಂಪಾದಕರು ಹಾಗೂ ಆಡಳಿತ ವರ್ಗದವರಿಗೆ ವಿಶೇಷವಾಗಿ ಕೊಡಗಿನ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅನಂತ ಶಯನರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈಗಲೂ ನನ್ನ ಕವನಗಳನ್ನು ಅತ್ಯಂತ ಪ್ರೀತಿಯಿಂದ ಪ್ರಕಟಿಸುತ್ತಿರುವ ಕೊಡಗಿನ ಶಕ್ತಿ ಪತ್ರಿಕೆ ಹಾಗೂ ಉದಯೋನ್ಮುಖ  ಪ್ರಜಾಸತ್ಯ ಪತ್ರಿಕೆಯ ಸಂಪಾದಕರಾದ ದಿನೇಶ್ ಇವರಿಗೂ ಹಾಸನ ಜಿಲ್ಲೆಯ ಪತ್ರಿಕೆಗಳಲ್ಲಿ ನನ್ನ ಕವನಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವ ಮೂಲಕ ಹಾಸನ ಜಿಲ್ಲೆಯ ಜನತೆಗೆ ನನ್ನನ್ನು ಪರಿಚಯಿಸಿದ ಹಾಸನ ವಾಣಿ, ಪ್ರತಿನಿಧಿ, ಸತ್ಯದ ಹೊನಲು,ಹಲೋ ಹಾಸನ್,ಅಮೋಘ ವಾಣಿ, ಜನ ಮಿತ್ರ, ನ್ಯೂಸ್ ಇ ಪೇಪರ್, ಭೀಮ ವಿಜಯ, ಪತ್ರಿಕೆಯ ಸಂಪಾದಕರಿಗೂ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳಿಗೂ ಧನ್ಯವಾದಗಳು.

ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ನೌಕರಿ ಹಾಗೂ ಓದು ಬರವಣಿಗೆ ಇವುಗಳಿಗೆ ಅನುವಾಗುವಂತೆ ಮನೆ, ಮನ ಹಾಗೂ ನನ್ನ ಕೌಟುಂಬಿಕ,ಸಾಮಾಜಿಕ ಜೀವನದ ಸಮತೋಲನ ಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲು ಪ್ರತಿಯೊಂದರಲ್ಲೂ ಸಹಕಾರ ನೀಡುತ್ತಿರುವ ನನ್ನ ಅರ್ಧಾಂಗಿ ಶ್ರೀಮತಿ ಶಿವಮ್ಮ ವೈಲೇಶ, ನನ್ನೆರಡು ಕಣ್ಣುಗಳೇ ಆಗಿರುವ ಅದಕ್ಕಿಂತ ಹೆಚ್ಚಾಗಿ ನನ್ನ ಸಮಸ್ತ ಆಸ್ತಿಯೇ ಆಗಿರುವ ಮಕ್ಕಳಾದ ಚಿ|| ಕವನ್ ಕುಮಾರ್. ಪಿ.ವಿ. ಮತ್ತು ಕು|| ಕಾವ್ಯ ಶ್ರೀ. ಪಿ.ವಿ. ಇವರಿಗೆ ಜನ್ಮಾಂತರಕ್ಕೂ ಅಭಾರಿಯಾಗಿದ್ದೇನೆ.

ಹಾಗೆಯೇ ನನ್ನ ಜೀವನೋಪಾಯಕ್ಕೆ ಹಾಗೂ ಸಾಹಿತ್ಯ ಸೇವೆಗೆ ಸರ್ವ ಕಾಲಕ್ಕೂ ಬೆನ್ನೆಲುಬಾಗಿ ನಿಂತಿರುವ "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ"ಗೆ
ಕೂಡ ಚಿರ ಋಣಿಯಾಗಿರುತ್ತೇನೆ ಮತ್ತು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪುತ್ತೂರು ವಿಭಾಗದ ವಿಭಾಗಾಧಿಕಾರಿಗಳಾದ                ಇವರಿಗೂ ಮಡಿಕೇರಿ ಘಟಕದ ವ್ಯವಸ್ಥಾಪಕರು ಹಿತೈಷಿಗಳು ಆದ ಶ್ರೀಮತಿ ಹೆಚ್ ಗೀತಾ ಕುಮಾರ್ ಇವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕನ್ನಡ ಕ್ರಿಯಾ ಸಮಿತಿ ಕ ರಾ ರ ಸಾ ಸಂಸ್ಥೆ ಬೆಂಗಳೂರು ಕೇಂದ್ರ ಕಛೇರಿಯ ಅಧ್ಯಕ್ಷರಾದ ಶ್ರೀಯುತ ವ.ಚ. ಚೆನ್ನೇಗೌಡರು,ಶ್ರೀಯುತ ಪ್ರಭುಸ್ವಾಮಿಗಳವರಿಗೆ ಧನ್ಯವಾದಗಳು.

ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಿರೆಂದು ಯಾವಾಗಲೂ ಅಮ್ಮ ಎಂದೇ ಕರೆಯುವ ಶ್ರೀಮತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಇವರಲ್ಲಿ ಕೇಳಿಕೊಂಡ ಮೇರೆಗೆ ಅತ್ಯಂತ ಉತ್ಸಾಹ ಹಾಗೂ ಪ್ರೀತಿಯಿಂದ ಬರೆದು ಕೊಟ್ಟಿದ್ದಾರೆ ಅವರಿಗೆ ನನ್ನ ನಮನಗಳು

ಸಂಕಲನದ ಬೆನ್ನುಡಿಗಾಗಿ ಕೇವಲ ಪೋನ್ ಮುಖಾಂತರ ಹಿರಿಯ ಕವಿವರ್ಯರಾದ ಶ್ರೀ ಗಿರೀಶ್ ಕಿಗ್ಗಾಲು ಇವರಲ್ಲಿ ಮನವಿ ಮಾಡಿದಾಗ ಕೆಲವೇ ಸಮಯದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಬರೆದು ಮುದ್ರಿಸಿ ತಲುಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆಯ ನಿರ್ದೇಶಕರಾದ ಶ್ರೀ ಗಿರೀಶ್ ಕಿಗ್ಗಾಲು ಇವರಿಗೂ ನನ್ನ ನಮನಗಳು.

ಅಮ್ಮ ನಿಮಗಾಗಿ ಕವನ ಸಂಕಲನದ ಕರಡು ಪ್ರತಿಯನ್ನು ತಿದ್ದಿ ತೀಡಿ ಹೊನ್ನುಡಿಯಾಡಿದ ವಿಶ್ರಾಂತ ಪ್ರಾಶುಂಪಾಲರಾದ ಕೃಷ್ಣೇಗೌಡರ ಕಂಪಲಾಪುರ ಇವರಿಗೂ ನಮ್ಮ ಊರಿನವರೇ ಆದ ಶ್ರೀಮತಿ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯಪ್ಪ ನಿವೃತ್ತ  ಅಧಿಕಾರಿಣಿ ಶಿಕ್ಷಣ ಇಲಾಖೆ ಇವರಿಗೂ ನನ್ನ ಮನದಾಳದ ನಮನಗಳು

ಈ ಕೃತಿಯ (ಡಿಟಿಪಿ) ಅಕ್ಷರ ಜೋಡಣೆಯಂತಹ ಕಷ್ಟದ ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮುಖಾಂತರ ಕೃತಿಯನ್ನು ಬೇಗನೆ ಹೊರತರಲು ಸಹಾಯ ಮಾಡಿದ ಎಳೆಯ ಗೆಳೆಯರು ಆದ ಶ್ರೀಯುತ ಕಿಶೋರ್ ಕುಮಾರ್. ಬಿ.ಬಿ ತಾವೂರು ಇವರಿಗೂ ಕೂಡ ಮನದುಂಬಿದ ಧನ್ಯವಾದಗಳು.

"ಅಮ್ಮ ನಿಮಗಾಗಿ" ಕೃತಿಗಾಗಿ ಅಂದವಾದ ಮುಖ ಚಿತ್ರ ಬರೆದು ಕೊಟ್ಟ ಗೆಳೆಯರಾದ ದಕ್ಷಿಣ ಕೊಡಗಿನ ಹೆಸರಾಂತ ಕಲೆಯನ್ನು ಜೀವನವಾಗಿಸಿ ಕೊಂಡಿರುವ ಸತೀಶ್ ರವರಿಗೂ ಧನ್ಯವಾದಗಳು.

"ಅಮ್ಮ ನಿಮಗಾಗಿ" ಕೃತಿಯನ್ನು ಉತ್ತಮ ರೀತಿಯಲ್ಲಿ ಹಾಗೂ ಕ್ಲಪ್ತ ಸಮಯದಲ್ಲಿ ಅಚ್ಚು ಹಾಕಿಕೊಟ್ಟ __________ ಪ್ರಿಂಟರ್ಸ್ ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ

ಹಾಸನ ಜಿಲ್ಲೆಯ ಖ್ಯಾತ ಮಾಣಿಕ್ಯ ಪ್ರಕಾಶನ ಸಂಸ್ಥೆಯ ಮಾಲೀಕರು ಈ ಸಂಕಲನವನ್ನು ಹೊರತರಲು ಪ್ರೋತ್ಸಾಹಿಸಿದ ಮನೆ ಮನೆ ಕವಿಗೋಷ್ಟಿ ಬಳಗದ ಪ್ರಸಕ್ತ ಸಂಚಾಲಕರು ಆದ ಶ್ರೀಯುತ ಕೊಟ್ರೇಶ್ ಉಪ್ಪಾರ್ ರವರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು