ಕಾರ್ಮಿಕ ದಿನಾಸರಣೆ ಅಂದ್ರೇನು

ಕಾರ್ಮಿಕ ದಿನಾಸರಣೆ ಅಂದ್ರೇನು
~~~~~~~~~~~~~~~~~
ಏ ತಿಮ್ಮಿ ನಿನ್ ಮಗ ಅದ್ಯೇನೇನೋ
ಬರ್ದು ಕಳುಸ್ತ್'ತಿರ್ತಾನೆ ಅದೆಲ್ಲೇಲ್ಗೋ
ಇವತ್ತಿನ್ ದಿನ ಕ್ಯಾಮೆಗ್ ಬರ್ಬ್ಯಾಡ ಓಗ್
ಅಂದ್ಬುಟ್ನಲ್ಲಾ ಮೇಸ್ತ್ರಿ ರಾತ್ರಿಕೆ ಹೊಟ್ಗೇನ್ ಮಾಡನೇ

ಚಿಂತೆ ಹತ್ಸ್'ಗೊಂಡ್ ಮನೆಗ್ ಬಂದ್ರೆ
ಯಕ್ಕಾ ನಿನ್ ಗಂಡ್'ನ ಆಸ್ಪತ್ರೆಗ್ ತಗೋ
ಓಯ್ತಾವ್ರೆ ಬ್ಯಾಗ್ ಓಗು ಅಂತ ನೆರ್ಮನೆ
ಪುಟ್ನಂಜ ಯೋಳಿದ್ ಕೇಳಿ ಕಣ್ ಮಂಜಾಯ್ತು

ಎಲ್ಡ್ ದಿನ್'ದ್ ಹಿಂದೆ ಅದ್ಯಾರೋ ಹೊಸ ಸವ್ಕಾರ್ರ್
ತ್ವಾಟದಾಗೆ ಮರ ಕಪಾತ್ ಅನ್ಕೊಂಡು ಹ್ವಾದ್
ಚೆಲ್ವಾ ಬಿದ್ ನಡಾ ಮುರ್ಕೊಂಡ್ ಹೊರ್ಗೆ
ಬಿದ್'ಅವ್ನೆ ಡಾಗ್'ಟ್ರು ನರ್ಸು ಇಬ್ರೇ ಅವ್ರಂತೆ

ಉಳ್ದೋರ್'ಗೆ ಕಾರ್ಮಿಕರ ದಿನಾಸರಣೆಂತೆ
ಮಗ ಬರ್ಲಿ ಅದ್ಯಾವ್ ದಿನಾಸರಣೆ ಅಂತ
ಇವತ್ ಕೇಳ್ನೇ ಬೇಕು ಅಂತ ಮನಸ್ನಾಗೆ
ಅನ್ಕೊಂಡ್ಳು ತಿಮ್ಮಿ, ಹಟ್ಟಿ ಕಡಿಕ್ ಬಂದ್ಳು

ಭಾಷ್'ಣ ಬಿಗ್'ದು ಬಿರ್'ಯಾನಿ ತಿಂದ್
ಬಂದ್ ಮಗ ಬಲ್ ಗೊರ್ಕೆ ಹೊಡೀತಾ
ಬಿದ್ಕಂಡವ್ನೆ ಏನ್ಮಾಡನೇ ಕಾರ್ಮಿಕ ದಿನಾಸರಣೆ
ಅಂದ್ರೇ ಏನಂತ ಯಾರ್'ತಾವ್ ಕೇಳನೇ

ವೈಲೇಶ ಪಿ ಯೆಸ್ ಕೊಡಗು
೦೧/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು