ಬದುಕು-ಮೆಲುಕು
ಬದುಕು-ಮೆಲುಕು
~~~~~~~~~~
ಗೆಳತಿ ನಾ ಬಯಸುವೆನು ನಿನ್ನಾಣತಿ
ನಿನ್ನಂದ ಕೆಣಕಿ ಮನವಾಯ್ತು ಕೋತಿ
ತುಂಬು ಯೌವನದ ಮೈ ಮೆರವಣಿಗೆ
ಮೆರೆ ಮೆರೆಸಿ ಮತಿ ಜಾರಿದೆ ಮರೆವಿಗೆ
ನೀನಾದೆ ಒಡಲ ಹೆಜ್ಜೆ ಹೆಜ್ಜೆಗೆ ಕಾಲುಗೆಜ್ಜೆ
ಬಾಳ ನಡೆಗೆ ನಿನ್ನ ನಡಿಗೆ ಎನ್ನಡಿಗಡಿಗೆ
ಮತ್ತಿನಾ ರಥದ ಹಾದಿಗೆ ಪ್ರೀತಿಯುಡುಗೆ
ನವಜೀವದ ಉಗಮಕೆ ತಯಾರಿಸಿ ಅಡುಗೆ
ನಿನ್ನ ನೆನಪಿನಂಗಳದಿ ಇಂಗು ತಿಂದ ಪೆಂಗು
ಮಂಗನಂತಾಗಿಹೆ. ಅಂಗಾಂಗ ಸಂಗಕೆ ರಂಗು
ರಂಗಿನ ರಂಗವಲ್ಲಿಯ ಬಿಡಿಸಿ ಮದರಂಗಿ
ಚಿತ್ತ ಚಿತ್ತಾರದಲಿ ನೀನಾಗಿರುವೆ ಅರ್ಧಾಂಗಿ
ಒಲವೇ ಬದುಕು ಆಗಿರಲಿ ಸಕಲಕೂ
ಸಂಭ್ರಮದಲಿ ಎಲ್ಲರ ಮನದಿ ಮೆಲುಕು
ಹಾಕುವಂತಿರಲಿ ನಮ್ಮ ಹೆಮ್ಮೆಯ ಬದುಕು
ಬಯಸಿ ಬಯಸಿ ನೀ ಎನ್ನ ಜೊತೆಗಿರು ಸಾಕು
ವೈಲೇಶ ಪಿ ಯೆಸ್ ಕೊಡಗು
೧೦/೫/೨೦೧೮
Comments
Post a Comment