ತೊಗಲು ಬೊಂಬೆ
ತೊಗಲು ಬೊಂಬೆ
==============
ಹಗಲು ವೇಷದ ತೊಗಲು ಬೊಂಬೆಯಿದು
ನ್ಯಾಯ ನೀತಿಯ ಬೇಕೆಂದೆ ಮರೆತಂತಿಹುದು
ನಾನು ನನ್ನವರೆಂಬ ಸ್ವಾರ್ಥವೆ ಮೈಮನದೊಳಗಿಹುದು
ಸ್ವಜನ ಪಕ್ಷಪಾತವೇ ಪರಪಂಚದಿ ತುಂಬಿಹುದು.
ಕಾಂಟ್ಯಾಕ್ಟು ಕಂಟ್ರ್ಯಾಕ್ಟು ಕುಲಬಾಂಧವರಿಗಿರಬೇಕು
ಪಾಪದವರ ಮುಂದೆ ಪಾರದರ್ಶಕತೆ ಎನಲು ಬೇಕು
ನಾಲಿಗೆಯಲಿ ನ್ಯಾಯ ಅನ್ಯಾಯ ಬಯ್ದಿರಬೇಕು
ನಾನು ನಾನೆಂಬ ಅಹಂಕಾರವೇ ತುಂಬಿರಬೇಕು
ನೊಂದವರ ಬಾಳಿಗೆ ಮುಳ್ಳಾಗುವರು
ನೋವು ಏನೆಂದರೆ ಅರಿಯದವರು
ಅಧಿಕಾರದ ಅಂಧಾಕಾರದಿ ಮುಳುಗಿದವರು
ಗರ್ವ ಅಹಂಕಾರವೇ ಮೈದುಂಬಿದವರು
ಮೂರು ತಲೆಮಾರಿಗೂ ಕೂಡಿಟ್ಟವರು
ಕಾಂಚಾಣ ತುಂಬಿ ಕಣ್ಣು ಕಾಣದವರು
ಮೋಜು ಮಸ್ತಿಗೆ ಲಕ್ಷ ಕೋಟಿ ಕೊಡುವವರು
ಹಸಿದ ರೈತಸಂಕುಲಕೆ ಏನೂ ನೀಡರಿವರು
ಕೈಗೆ ಕಾಲಿಗೊಬ್ಬೊಬ್ಬ ಆಳುಕಾಳು ಇವರಿಗೆ
ಕೃತಜ್ಞತೆ ಅಭಿಮಾನದ ಅರಿವಿಲ್ಲ ಅಲ್ಪರಿಗೆ
ಮನುಜರೆಲ್ಲಾ ಕೈಗೊಂಬೆ ಎಂದರಿತವರಿಗೆ
ಸದ್ಬುದ್ಧಿಯ ನೀಡೋ ಬೊಮ್ಮ ಬೊಂಬೆಗಳಿಗೆ
ವೈಲೇಶ ಪಿ ಯೆಸ್ ಕೊಡಗು
#ಚಾಲಕ_ಕರಾರಸಾಸಂಸ್ಥೆ_ಮಡಿಕೇರಿ_ಘಟಕ
೧೮/೫/೨೦೧೭
Comments
Post a Comment