ಗಝಲ್ : ೩೧
ನೆಲವನೂಳುವ ನೇಗಿಲ ಗುಳವಾದರೂ ಸರಿಯೇ ಸಖಿ
ನೆರಳ ನೀಡುವ ಹೊಂಗೆ ಮರವಾದರೂ ಸರಿಯೇ ಸಖಿ
ವನ ಸವರುವ ಕೊಡಲಿಗೆ ಏಕಾಂಗಿಯಾಗಿ ಅದೇನು ಸಾಧ್ಯ
ಜತೆಗಿರೆ ಸ್ವಜನ ಶತ್ರು ಕಟ್ಟಿಗೆ ತುಂಡಾದರೂ ಸರಿಯೇ ಸಖಿ
ಸ್ವತಃ ಸಾಧಿಸದಿದ್ದರೆ ಏನಾಯಿತು ಸಾಧಿಸುವವರ ಜತೆಗೂಡಿ
ಸಾವಿನ ಅಂಚಿನವರೆಗೆ ತಲುಪುವುದಾದರೂ ಸರಿಯೇ ಸಖಿ
ಅವರಿವರ ನಿಂದಿಸುತಾ ನಡೆವವರು ತಮ್ಮ ತಾವರಿಯಲಾರರು
ತಾ ಎಡವಿ ಬಿದ್ದು ಸೊಂಟ ಮುರಿದುಕೊಂಡರೂ ಸರಿಯೇ ಸಖಿ
"ಸಿಡಿಲು"ನ ಮನವರಿಯದ ಬಲ್ಲವರು ಏನಂದರೇನು ಅಲ್ಲವೇ
ಎಂದಾದರೂ ಕಲೀಬೇಕು ಎಷ್ಟೆ ಬಲ್ಲವರಾದರೂ ಸರಿಯೇ ಸಖಿ
Comments
Post a Comment