ನೀನೇ ಎಲ್ಲಾ
ನೀನೇ ಎಲ್ಲಾ
~~~~~~
ನೀನಿಲ್ಲದೇ ನಮಗೆ ಜಗವೇ ಇಲ್ಲ
ಮನದ ತುಂಬಾ ತುಂಬಿರುವೆಯಲ್ಲ
ಆದಾಗ್ಯೂ ನಮಗೆ ನೀನೇ ಎಲ್ಲವೇನಲ್ಲ
ನೀನಿದ್ದರೆ ಬದುಕಿನಲಿ ದೊರೆವುದೆಲ್ಲ
ದಿನವೂ ನಿನಗೆಂದೇ ಹುಡುಕಾಟ
ನಿನ್ನಿಂದ ನಮಗೆ ಪರದಾಟ ಸಂಕಟ
ನಿನಗಾಗಿ ಪರಸ್ಪರ ಕೆಸರೆರಚಾಟ
ಕೊಲೆ ಸುಲಿಗೆ ಮಿಥ್ಯದ ಜೊತೆ ಏಗಾಟ
ಯಾರು ಬಿಟ್ಟರೂ ಬಿಡಬಹುದು.
ಹೆತ್ತವರ ಹೊತ್ತೊಯ್ದು ಇಡಬಹುದು.
ಕತ್ತಲಲಿ ಕಣ್ಕಟ್ಟಿ ಬಿಟ್ಟರೂ ಕೊನೆಯ
ನಡೆಯೂ ನಿನ್ನೊಡಲ ಬಯಕೆಯಾ?
ಜನನಕೊಂದು ನಾಮ ಮತ್ತೆ ಸುತ್ತಿ ನೇಮ
ಹರಿದಾಡಿದಲ್ಲಿ ಪಸೆ. ಅರಳಿಸಿ ಎಲ್ಲರಾಸೆ
ಅಲೆಅಲೆಯೊಳು ಇಳಿವ ಅವಸರದ ಕೂಸೆ
ಹೊರಳಿ ಮರಳಿ ಅರಳಿ ಹಾರೈಸೋ ಆಸೆ
ವೈಲೇಶ ಪಿ ಯೆಸ್ ಕೊಡಗು
೨/೬/೨೦೧೮
Comments
Post a Comment