ಯಾಕೀ ಪುಳಕ

ಯಾಕೀ ಪುಳಕ
~~~~~~~~
ನನ್ನದೇನೋ ಹೆಚ್ಚುಗಾರಿಕೆಯೆಂಬ ಪುಳಕ
ದಿನ ದಿನ ಒಡಲ ಕಡಲಾಳದ ಕಾಮನೆಗಳ
ಬಿಮ್ಮನೆ ಬಿಚ್ಚಿಟ್ಟು ಹಂಚಿಕೊಳ್ಳುವ ತವಕ
ಅನುಭವದ ಕೊರತೆಯೋ ಅಹಂಮಿನ ಅಮಲೋ
ಅರಿಯಲಿಲ್ಲ ಮಾನ ಮರ್ಯಾದೆಯು ಮನಕ.

ಹುಚ್ಚು ಕೋಡಿ ಮನಸ್ಸಿಗೆ ಲಗಾಮು ತಂದವರಿಲ್ಲ
ಹೊಗಳಿ ಒರಳಿಗೆ ಹಚ್ಚಿ ಕೊರಳು ಕೊಯ್ವವರೆಲ್ಲಾ
ಮರುಳು ಅರಳುವ ಮುನ್ನ ಉಸುರದಾದಿರಲ್ಲ
ಕೆಡದೇ ಲದ್ಧಿ ತೆರದ ಬುದ್ಧಿ ಎಲ್ಲಡಗಿಹುದೋ ಕಾಣೆನಾ
ಬಲಿತು ಹರಕೆಯ ಕುರಿಯಾದರೆ ಫಲವೇನಿಲ್ಲ 

ದಾರವ ಹಿಡಿತ ಸಡಿಲಗೈದೊಡೆ ಸೂತ್ರದಾರಿ
ಮನವು ಬಲಿವ ಮುನ್ನ ನೋಡದೇ ನಡೆದ ಮಾರಿ 
ಹಾದಿಗುಂಟಾ ಚೆಲ್ಲಬೇಕಿದ್ದ ಬೆಳಕು ತಪ್ಪಿತು ದಾರಿ
ಸಮಾಜಕೆ,ಸ್ತ್ರೀಸಂಕುಲಕೆ,ಮನುಕುಲಕೆ,ಮಹಾಮಾರಿ
ಮುಂದಿವರು ಬದುಕುವರು ಪತಿಯನ್ನೇ ಮಾರಿ

ವೈಲೇಶ ಪಿ ಯೆಸ್ ಕೊಡಗು
೧೫/೬/೨೦೧೮

 

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು