ಗಝಲ್ :೩೨ (ಕಾಫಿಯಾನ)
ಗಝಲ್ : ೩೨ (ಕಾಪಿಯಾನ)
~~~~~~~~~~~~~~~
ಅರಳುವ ಮುನ್ನ ಅಳಿಸದಿರಿ ನಮ್ಮನ್ನ
ಬದುಕಬೇಕಿದೆ ಬಹಳ ದಿನ ನಾವು ಇನ್ನ
ಹಾಲು ಕುಡಿಯುವ ಹಸುಳೆಗಳು ನಾವು
ಕಾಮದ ಕಣ್ಣಲ್ಲಿ ಕಾಣದಿರಿ ಈ ತನುವನ್ನ
ನಿಮ್ಮ ಸಹೋದರಿಯರಿಗೂ ಎಳೆಯರು
ಎಳೆದಾಡದಿರಿ ನಮ್ಮ ಮೈ ಕೈ ಕಾಲುಗಳನ್ನ
ನಿಮ್ಮ ಕ್ರೌರ್ಯ ಸಹಿಲಾರೆವು ಬಿಟ್ಟು ಬಿಡಿ
ಕರವನು ಮುಗಿದು ಬೇಡುತಿಹೆವು ನಿಮ್ಮನ್ನ
ನಗುನಗುತಾ ಶಾಲೆಗೆ ಹೋಗುತ್ತಿರುವೆವು
ದಯವಿಟ್ಟು ಹಿಂಬಾಲಿಸದಿರಿ ನೀವು ಅಣ್ಣ
ಯಾರ ಕಂದಮ್ಮಗಳಿಗೂ ಹೀಗಾಗದಿರಲಿ
"ಸಿಡಿಲು"ನು ಬೇಡುವನು ಶ್ರೀ ಈಶ್ವರನನ್ನ
Comments
Post a Comment