ಬೋಧಿವೃಕ್ಷದಡಿ ವಿಮರ್ಶೆ
ಕುಮಾರ್ ಹೊನ್ನೇನ ಹಳ್ಳಿ ಸರ್ ಇವರ ಕವನಗಳು ಅತ್ಯಂತ ಗೂಢಾರ್ಥವನ್ನು ಹೊಂದಿರುತ್ತವೆ ಎಂದು ಕೇಳಿದ್ದೆ.
ಅವರ ಕವಿತೆಯ ಒಳಾರ್ಥ ತಿಳಿಯಲು ಆಹ್ವಾನ ನೀಡುವ ಮುಖಾಂತರ ಅವರ ಕವನದ ವಿಮರ್ಶೆಗೆ ಹಾದಿ ಮಾಡಿಕೊಟ್ಟ ಕುಮಾರ್ ಹೊನ್ನೇನಹಳ್ಳಿ ಸರ್ ಹಾಗೂ ಬಳಗದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತಾ *ಬಳಗದ ಪ್ರತಿ ಸದಸ್ಯರ* ಅಭಿಪ್ರಾಯಕ್ಕಾಗಿ ಕಾದು ಕುಳಿತಿರುವೆ. ದಯವಿಟ್ಟು ನನ್ನ ಅಭಿಪ್ರಾಯ ತಪ್ಪಾಗಿದ್ದರೆ ತಪ್ಪು ಎಂದು ಸರಿಯಾಗಿ ಇದ್ದರೆ ಸರಿ ಎಂದು ತಿಳಿಸಬೇಕೆಂದು ಈ ಮೂಲಕ ಸವಿನಯ ಕೋರಿಕೆ
ಬೋಧಿವೃಕ್ಷದಡಿ
ಎರೆಹುಳುಗಳಿಗೆ
ಎಡತಾಕುವುದ ಬಿಟ್ಟಿದ್ದೇನೆ
ನೀಲಿ ತಿಮಿಂಗಿಲ ಆಗಲೇಬೇಕೆಂದು
*ಚಿಕ್ಕ ಪುಟ್ಟ ಉದ್ಯೋಗ ಬೇಡವೆಂದು ಉತ್ತಮವಾದ "ಗುರು" ಪಟ್ಟವೇ ಬೇಕೆಂದು ಮನಸ್ಸು ಮಾಡಿದ್ದೇನೆ*
ಸೂಚನೆಯ ಪಟ್ಟಿಯಲ್ಲಿದ್ದಂತೆ ಉಂಡು
ಹೊರಟಿದ್ದೇನೆ ಹುಡುಕುತ್ತ
ಬೋಧಿವೃಕ್ಷವ
*ಬಡತನದಲ್ಲಿ ಸಿಕ್ಕಷ್ಟೇ ಉಂಡು ವಿದ್ಯಾಭ್ಯಾಸ ಮುಗಿಸಿ ಕಾಲೇಜಿನಲ್ಲಿ ಉದ್ಯೋಗ ಹುಡುಕುತ್ತಾ ಹೊರಟಿರುವೆ.*
ಅಂತೂ ಇಂತೂ
ತಡಕಾಡಿ ಹಿಡಿದಿದ್ದೇನೆ
ಬೋಧಿವೃಕ್ಷದಡಿ
ನನ್ನ ನಂಬರಿನ ಆಸನವ
ನಿನ್ನ ಕೃಪೆಯ
ಕಿರಿ ಬೆಳಕಿನಲಿ
*ಕೊನೆಗೂ ಒಂದು ಕಾಲೇಜಿನಲಿ ಹುದ್ದೆ ಹಿಡಿದಿದ್ದೇನೆ.
ದೈವವೇ ನಿನ್ನ ಕೃಪೆಯಿಂದ ಇದು ಸಾಧ್ಯವಾಯಿತು.*
ಹೇಗೆ ಕೂರಬೇಕೆಂದರಿಯದೆ
ಸಲಹಾದಾನಿಗಳಿಗೆ ತಲೆಯೊಡ್ಡಿ
ಕುಬ್ಜನಾಗುತ್ತಲೇ
ವಿನ್ಯಾಸ ಬದಲಿಸುತ್ತಿದ್ದೇನೆ
ಸಾಲದಲಿ ಮೊದಲಮನೆ ಕಟ್ಟುವವನಂತೆ.
*ಮೊದ ಮೊದಲು ಏನರಿಯದೇ ಅವರಿವರ ಸಲಹೆಗಳನ್ನು ಕೇಳಿ ಹೇಗೆ ನಡೆದುಕೊಳ್ಳುವುದೆಂದು ಅಯೋಮಯವಾಗಿತ್ತು.*
ಇನ್ನು,
ಮೈಮನ ಮರೆತು ನೋಡಬೇಕಿದೆ
ಕಣ್ಣ ಮುಚ್ಚಿ,
ಸಾಗಬೇಕಿದೆ ಸಂಚಯಿಸುತ್ತ
ಹಿಮನದಿಯಂತೆ
*ಅದೆಲ್ಲವನು ಮರೆತು ಏಕಾಗ್ರತೆಯಿಂದ ಸುತ್ತಲಿನ ವಿಚಾರಗಳ ಹೊರತು ಈಗಲಾದರೂ ಗಂಭೀರವಾಗಿ ನಡೆದುಕೊಳ್ಳಬೇಕಿದೆ*
ಅಲ್ಲೋಲ ಕಲ್ಲೋಲ ಅಲೆಗಳ ಕತ್ತರಿಸಿ
ನಾಲೆಗೆ ಹಾಕುತ್ತ ತಲುಪಬೇಕಿದೆ
ನಿಮ್ಮ ಹೊಲ,ಗದ್ದೆ,ತೋಟಗಳಿಗೆ.
*ಮನದ ತುಮಲ ತುಂಟಾಟಗಳ ಅಡಗಿಸಿ
ಜ್ಞಾನದ ದೀವಿಗೆಯನು ಹಿಡಿದು ಪಾಠದ ಮೂಲಕ ವಿದ್ಯಾರ್ಥಿಗಳಿಗೆ ಉಣಬಡಿಸಬೇಕಿದೆ.*
-------ಕುಮಾರ್ ಹೊನ್ನೇನಹಳ್ಳಿ.
ಕವಿಭಾವವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದಕ್ಕೆಯಾಗಿದ್ದರೆ ಕ್ಷಮೆ ಇರಲಿ.
ತಪ್ಪಾಗಿದೆ ಎಂದಾದಲ್ಲಿ ಅನ್ಯಮನಸ್ಕರಾಗದೇ ಕವಿಭಾವದ ವಿಡಂಬನೆ ಮಾಡುವ ಮೂಲಕ ನಮ್ಮ ಕಲಿಕೆಗೆ ಸಹಾಯ ಮಾಡಲು ಕೋರಿಕೆ
ವೈಲೇಶ ಪಿ ಯೆಸ್ ಕೊಡಗು
೨೫/೫/೨೦೧೮
Comments
Post a Comment