ಇವರ್ಯಾರು ?

ಇವರ್ಯಾರು?
~~~~~~~
ಅರಿವ ಜತೆಗೆ ಅರಳಿದವರು
ಅರುಳು ಮರುಳಿಗೂ ಜೊತೆಯಾಗುವರು
ಕರೆಯದೇ ಕಷ್ಟಕೆ ಬರುವವರು
ಮರೆಯದೇ ಸುಖಕೆ ಕರೆಯುವವರು

ಕಾಡಿಸಿ ಬೇಡಿಸಿ ತಣಿಸಿ ಕುಣಿಸಿ
ಹುಣಿಸೆಮರ ಹತ್ತಿಸುವವರು
ಬ್ಯಾಟು ಬಾಲು ಮೈದಾನದಲಿ
ಮಾತ್ರ ಆಡಬೇಕೆನ್ನದವರು

ಮಿಠಾಯಿ ಚೀಪಲು ಕಾಗೆ ಎಂಜಲು
ಹಣ್ಣಿನ ಗೊಂಚಲು ಹಲಸು ಮಾವುಗಳ ಬೇಟೆಗೆ
ನಿಂತರು. ಹೊಗಳಿ ಹೊಗಳಿ ಅಟ್ಟಕ್ಕೆ ಹತ್ತಿಸಿ
ನೆಟ್ಟಗೆ ನಿಂತರೆ ಮರಳಿ ಕಾಲೆಳೆದವರು

ಅಮ್ಮನ ಒಪ್ಪಿಸಿ ಅಪ್ಪನ ತಪ್ಪಿಸಿ
ನಡುರಾತ್ರಿಯಲಿ ಮನೆಯೊಳು ನುಗ್ಗಿಸಿ
ಅಪ್ಪನ ಚಳುಕಿನ ಬೆತ್ತಕೆ ಬೆನ್ನಾದವರು
ಅಮ್ಮನ ಅಳುವಿಗೆ ಕಣ್ಣೀರಾದವರು

ಯಾರು ಇವರ್ಯಾರು ?

ವೈಲೇಶ ಪಿ ಯೆಸ್ ಕೊಡಗು
೨೯/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು