ಕೊಳೆ ಕಳೆದು
ಇಳೆಯ ಕೊಳೆ ಕಳೆದು
===============
ದಣಿವರಿಯದ ದಿನಮಣಿ
ಹದಗೈದಿಹ ಜಲದಮಣಿ
ಸಾಕಾರ ಮೇಘದಾಕಾರ
ಸುರಿಯಲಿ ಧಾರಕಾರ
ಪರನಾಡ ಪರದಾಟಕೆ
ಪರಿಹಾರದ ಪರಿಚಾರಕೆ
ಪರಿವು ಪರಿಚ್ಛೇದಿಸದೇ
ಪರಾಮರ್ಶಿಸಿ ಪರಿಣಾಮ
ನೀಡೆ ಪಾವನ ಕ್ಷೇತ್ರವೇ
ಚಿಂತನೆ ಗೈದು
ಮಂಥಿಸಿ ಈದು
ಈರ್ವರದೂ ಸಮಪಾಲು
ನಮಗಿರಲಿ ಸಮಬಾಳು
ಎಂದರಿತೊಡೆ ಪಾವನವೀ ಜೀವನ
ಇಳೆಯ ಕೊಳೆ ಕಳೆದು
ಜಲದ ಹೊಳೆ ಹರಿದು
ಬೆಳೆಯ ಮೊಳೆ ಕಳೆಗಟ್ಟಿ
ಜಲದಾಸೆಯ ಪುಡಿಗಟ್ಟಿ
ಹನಿಹನಿ ಹನಿಯುವವರಗೆ
ಅಂಬರದ ಮೇಘದೊಳಗೆ
ಅಡಗಿರಲಿ ರವಿರಾಯ
ಇದೆನ್ನ ಮನದ ಪ್ರಾರ್ಥನೆ
ವೈಲೇಶ ಪಿ ಯೆಸ್ ಕೊಡಗು
#ಚಾಲಕ_ಕರಾರಸಾಸಂಸ್ಥೆ_ಮಡಿಕೇರಿ_ಘಟಕ
೨೪/೫/೨೦೧೭
Comments
Post a Comment