ಮನವೇ ಸ್ವಲ್ಪ ಕಾಯಿ

ಮನವೇ ಸ್ವಲ್ಪ ಕಾಯಿ
~~~~~~~~~~~
ಬೀಳದಿರು ವಶ
ನಗುತಿರಲಿ ದೇಶ
ಕಾರದಿರು ದ್ವೇಷ
ಕಳಚಿಡು ವೇಷ
ಚೆಲ್ಲದಿರು ವಿಷ 

ಏತಕೋ ಹೊಗಳಿ
ಮತ್ಯಾರನ್ನೊ ತೆಗಳಿ
ಪ್ರಶಸ್ತಿ ಪಡಕೊಳ್ಳು
ಹಣವನೀದು ಹೆಸರು
ಸನ್ಮಾನವನೇ ಕೊಳ್ಳು

ಒಬ್ಬರನು ದೂಷಿಸಿ
ಮತ್ತೊಬ್ಬರನು ದ್ವೇಷಿಸಿ
ದುಃಖ ಅನಗತ್ಯವೆನಿಸಿ
ಆಗಬೇಡವೋ ದೈನೇಸಿ
ಜನಗಳೆದುರು ಬೇವರ್ಸಿ

ಅವರಿವರ ಬಚ್ಚಲ ಬಾಯಿ
ನೀನೇಕಾದೆ ನೆಕ್ಕುವ ನಾಯಿ
ದುಡಿದುಣ್ಣಲು ನಿನಗಿದೆ ಕೈಯಿ
ನೀನಗೇತಕೆ ದೆವ್ವದ ಇಡುಗಾಯಿ
ಮನವೇ ಆಗಸದಿ ನಿಂತು ಕಾಯಿ

ವೈಲೇಶ ಪಿ ಯೆಸ್ ಕೊಡಗು
೧೮/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು