ನಿನ್ನೊಲವು
ನಿನ್ನೊಲವು
~~~~~~
ಬಾಳುವೆಯ ಬಿತ್ತಿಯಲಿ ನಿನ್ನೊಲವು
ಬಿತ್ತರದೆ ಎತ್ತರವು ವಾತ್ಸಲ್ಯದ ಹರಿವು
ಕಡಲೊಡಲಾಳ ಜತೆಗೆ ವಿಸ್ತಾರದರಿವು
ನಿನ್ನೊಲುಮೆ ನಿನಗೆ ಸಾಟಿ ಯಾವುವು?
ಕಟುವನದ ಕಾರ್ಗಲ್ಲಿನಲಿ ಚಿಗುರೊಡೆದ
ಸಸಿಗಳ ಪೊರೆವ ಅವನಿಯ ಒಲವಂದ
ಕಂಡೆನು ಉದರ ಗುಡಿಯ ಗರ್ಭದಿಂದ
ಹೊರಬಂದೆ ಅಳುತ ಪಡೆದೆನು ಆನಂದ
ಜಗಜ್ಜೀವನ ಚಿತ್ರಣ ಅರಿಯದಾದೆನು
ದಿನಮಾನಕ ನುಡಿಯ ತಿಳುಹಿದೆ ನೀನು
ಇಹಪರದ ಸತ್ಯ ತತ್ವ ಅರುಹುವೆಯೇನು
ಸುಮಾತಾ ನೀನಿರದೇ ಏನರಿಯಲಾರೆನು
ಊಡುವುದರ ಕೂಡೆ ಆಡುವುದಾ ಕಲಿಸಿ
ಉಣುವುದಲ್ಲದೆ ಅನ್ಯರಿಗೆ ಅನ್ನವನ್ನಿಕ್ಕಿಸಿ
ಊರಿನವರೆದುರು ನಡೆಯುವುದಾ ತಿಳಿಸಿ
ಉರುವಲೊಳು ಬೆಂದೆ ಕಂದರನು ಮೆರೆಸಿ
ವೈಲೇಶ ಪಿ ಯೆಸ್ ಕೊಡಗು
೧೭/೫/೨೦೧೮
Comments
Post a Comment