ಕಿಸ್ಮತ್ ಕಾ ತಾಕತ್

ಕಿಸ್ಮತ್ ಕಾ ತಾಕತ್
~~~~~~~~~~

ಕಿಸ್ಮತ್ ಕಿಸ್ಮತ್ ಕಿಸ್ಮತ್ತು
ಕಿಸ್ಮತ್ ಇದ್ದರೆ ತಾಕತ್ತು
ಕಿಸ್ಮತ್ ಇಲ್ದೇ  ಹೊಯ್ತಂದ್ರೆ
ಸಿಗದು ನಿಮಗೆ ಬಿಸ್ಕತ್ತು ||ಪ||

ವಿದ್ಯೆ ಕೆಲಸ ಏನಾಗ್ಲಿ
ಬರ್ದಿರಲೇ ಬೇಕು ಹಣೆಯಲ್ಲಿ
ಬರೀದೆ ಇದ್ರೆ ಬದುಕಲ್ಲಿ
ಸಿಗೋದು ಕೊನೆಗೆ ಚೊಂಬಿಲ್ಲಿ || ೧||

ಓಟು ನೋಟು ಸೀಟಾಗ್ಲಿ
ಕಾಯ್ಲೇ ಬೇಕು ಬಾಗಿಲಲ್ಲಿ 
ಕಾಲ ನೆಟ್ಗೆ ಇರದಿದ್ರೆ ಏನಿದ್ರೇನು ಬಾಳಲ್ಲಿ
ಹಣೆಲಿ ಸರಿಯಾಗ್ ಬರ್ದಿದ್ರೆ
ಎಲ್ಲ ಬರುವುದು ಬದುಕಲ್ಲಿ ||೨||

ವೈಲೇಶ ಪಿ ಯೆಸ್ ಕೊಡಗು
೧೭/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು