ಕಾಡುತಿದೆ ನೆನಪು
ಅಮ್ಮನ ದಿನದ ನೆನಪಿಗಾಗಿ
ಕಾಡುತಿದೆ ನೆನಪು
~~~~~~~~~
ಚಂದ್ರಮನ ತೋರುತ ತುತ್ತಿತ್ತು ತುತ್ತು
ತುತ್ತಿಗೂ ಮುತ್ತಿತ್ತು ಮೆತ್ತಗೆ ಮಲಗಿಸಿ
ಕೈ ತೊತ್ತು ತೊಟ್ಟಿಲ ಗೆಜ್ಜೆಗೂ ಒಲವಿತ್ತು
ಮೆರೆದಿತ್ತು ಅಮ್ಮನೊಲವಿನ ತಾಕತ್ತು
ಅವಳ ಕೈಯ ಜಳಕ ನೆನೆಯಲು ಮೈ
ಪುಳಕ ಕಣ್ಣು ಕುಕ್ಕುವ ಕಾಡಿಗೆ ಕಪ್ಪು
ಹಚ್ಚಡದರಿವೆಯೂ ಪೌಡರ್ ಮೇಕಪ್ಪು
ಸಾಂಭ್ರಾಣಿ ಹೊಗೆಗೆ ಕೆಂಪಾಗಿತ್ತು ಕದಪು
ಮತ್ತೆ ಮತ್ತೆ ಮತ್ತೇರಿದಂತೆ ವಕ್ಕರಿಸಿ
ಬೇಡವೆಂಬ ಭಾವನೆಗಳನು ಧಿಕ್ಕರಿಸಿ
ಮಮತೆಯಲಿ ಮನದುಂಬಿ ನೇವರಿಸಿ
ಸಾಕಿದಮ್ಮ ಇಣುಕಿದರು ನೇಪಥ್ಯ ಸರಿಸಿ
ಕನಸಲೂ ಕಾಣದ ಮರೆಯಾದ ರೂಪು
ಒತ್ತರಿಸಿ ಒತ್ತುತಿದೆ ಹಡೆದಮ್ಮನ ನೆನಪು
ಅಮ್ಮನ ಕರುಣೆಗೂ ಅದೆಂತಹ ಒನಪು
ಈಗಲೂ ನಾನಾಗಿರಬೇಕಾಗಿತ್ತು ಪಾಪು
*ವೈಲೇಶ ಪಿ ಯೆಸ್ ಕೊಡಗು*
*೯/೫/೨೦೧೮*
Comments
Post a Comment