ನಿರೀಕ್ಷೆ

ನಿರೀಕ್ಷೆ
=======

ಇಳೆಗೆ ಹೂ ಮುತ್ತನಿತ್ತ ಮಳೆ
ಮತ್ತೆ ಎತ್ತ ಹೊರಟಿದೆ ಗುಳೆ
ತಡೆಯಲಿಲ್ಲ ಗುಡ್ಡ ಬೆಟ್ಟ
ವನ ಕಡಿದು ಒಟ್ಟಿದ ಚಟ್ಟ

ಬಿರಿವ ಮೇಘದೊಡಲು
ಅಪ್ಪಳಿಸಿ ಗುಡುಗು ಸಿಡಿಲು
ಮಿಂಚಿ ಮಂಜು  ಕಂಗಳು
ಮಳೆ ನಿರೀಕ್ಷೆ ತಂಗಳು 

ಅದೋ ನಡೆದಿದೆ ಮೇ
ಹುಲ್ಲು ಸೊಪ್ಪಿಗೆ ಆಡು ಮೇ...
ನುಡಿದಿದೆ ಕರು ಅಂಬಾ....
ಕೆಚ್ಚಲು ಖಾಲಿ ಕಣಮ್ಮಾ...

ನಡುಬಿಸಿಲ ಉರಿ ಬೇಗೆ
ಸೆಕೆ ತಾಳಲಾರದೇ ಮೈಗೆ
ದೂಳು ಗೋಳಿನ ಮಣ
ತನು ತಾಳಲಾರದ ನೆಣ

ಹೀಗೆ ನಡೆದರೆ ಚಣಚಣ
ಮನುಜ ಬಾಳಲಾಗದಣ್ಣ
ಸುರಿಯೋ ಮೇಘದಣ್ಣ
ನದಿ ತುಂಬಿ ಮೊರೆಯಲಣ್ಣ
ನಿನ್ನ ನಾಮ ಮೆರೆಯಲಣ್ಣ

ವೈಲೇಶ ಪಿ ಯೆಸ್ ಕೊಡಗು
೩/೫/೨೦೧೭
#ಚಾಲಕ_ಕರಾರಸಾಸಂಸ್ಥೆ_ಮಡಿಕೇರಿ

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು