ಮರಳಿ ಬಂದಿದೆ ಯುಗಾದಿ
ನಾಡಿನ ಎಲ್ಲಾ ನಮ್ಮ ಸ್ನೇಹ ಬಳಗದ ಆತ್ಮೀಯರೇ ತಮಗೂ ತಮ್ಮ ಕುಟುಂಬದ ಸದಸ್ಯರು ಹಾಗೂ ತಮ್ಮ ಬಂಧುಮಿತ್ರರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಮರಳಿ ಬಂದಿದೆ ಯುಗಾದಿ
~~~~~~~~~~~~~~
ಮತ್ತೆ ಮತ್ತೆ ಮರಳಿ ಬಂದಿದೆ ಯುಗಾದಿ
ನೆನಪ ಬುತ್ತಿಯು ಹೊತ್ತು ಹೊರಳಿತೊಂದು ತಗಾದಿ
ಬೇವು ಬೆಲ್ಲದಂತೆ ಹಾಸಿದೆ ಹೊಸತೊಂದು ಗಾದಿ
ಹೇಳ ಹೋದರೆ ಮುಗಿಯದು ನೆನಪಿನ ಯಾದಿ
ಅದೆಷ್ಟು ಬೇಗ ಕಳೆದ್ಹೋಯ್ತು ಹರುಷದ ತೇದಿ
ಅಪ್ಪನ ಬೆರಳ್ಹಿಡಿದು ಸಂತೆ ಗುಂಟಾ ನಡೆದ ನಡೆ
ವಡೆ ಪಾಯಸದ ಬೆಲ್ಲ ಬೇಳೆಯ ಹಿಡಿದು ಮನೆ ಕಡೆ
ಕಿರೀಟ ಹೊತ್ತ ಪುಟ್ಟ ಮುಕ್ಕಣ್ಣನ ತಾಕಲಾಟ ಕಾಟ
ಮುಕ್ಕಣ್ಣನು ಕೀಳ ಹೋಗಿ ಕೈ ಕಿತ್ತ ಗಾಯದ ನೋಟ
ಬಾಲ್ಯದ ಗೆಳತಿಯ ವಾರೆನೋಟದ ಕಳ್ಳ ಕಣ್ಣೋಟ
ಅಮ್ಮನು ಹಸಿರು ಸೀರೆಯ ನವಿಲು ಗರಿಯ
ಸೆರಗು ಬಿಗಿದು ಒಬ್ಬಟ್ಟ ಹೂರಣವ ಹೊರಳಿಸುವ
ಮುನ್ನ ಅಪ್ಪನ ಜೊತೆ ಸೇರಿ ಕಟ್ಟಿದಾ ತೋರಣ
ಮಾವು ಬೇವಿನೆಲೆಗೆಂದು ಮರದ ಮಾಳಿಗೆಗೆ
ಏರಿ ಅಲ್ಲಿಂದ ನೆಲವ ತಲುಪಲಾರದ ಸಂಕಟ
ಭಗವಂತನೇ ಭಾಗ್ಯದೊಡನೆ ಭವ್ಯ ಭಾವನೆಗಳನ್ನಿಟ್ಟು
ಜಗದ ಜನರ ಬವಣೆಗಳನ್ನೆಲ್ಲಾ ದೂರ ದೂರ ಅಟ್ಟು.
ಇಟ್ಟ್ಹಾಂಗ ಇರುವೆನು ನಾ. ಜೀವಸಂಕುಲದ ಸಂಕಷ್ಟ
ಬಗೆ ಹರಿದು ಭಾಗ್ಯಗಳ ಮಳೆ ಸುರಿದು ವಿಳಂಬಿ
ಸಂವತ್ಸರವ ಸಂತಸದಿಂದಿರಿಸೋ ಅರ್ದನಾರೀಶ್ವರ
ಬೆಳೆ ಬೆಳೆವ ಇಳೆಗೆ ಸಮಯದಿ ಇಳಿಯಲಿ ಮಳೆ
ಪ್ರಜೆಗಳ ಏಳ್ಗೆಯೇ ಮೊದಲಾಗಲಿ ಅಳಿಯಲಿ ಮನ
ತುಂಬಿದ ಕೊಳೆ ನರನ ಜೊತೆಗೆ ವಾನರ ವನ್ಯ ಜನ್ಯ
ಸಂಪತ್ತು ಪ್ರಾಣಿ ಪಕ್ಷಿಗಳು ತುಂಬುತಿರಲಿ ಜೀವಕಳೆ
ಯುಗದ ಮೊಗವಾಗಲಿ ನಗು ತುಂಬಿದ ಮಗುವ ಕಳೆ
ವೈಲೇಶ ಪಿ ಯೆಸ್ ಕೊಡಗು
೧೭/೩/೨೦೧೮
Comments
Post a Comment