ಗಝ಼ಲ್ : ೨೪
ಗಝ಼ಲ್ : ೨೪
~~~~~~~~
ಅವ್ವನ ಪ್ರೀತಿಯ ಕಂದ ನಾನಾಗಬೇಕೆಂಬ ಆಸೆಗೆ ಕೊನೆಯಿಲ್ಲ
ಅವ್ವೆಗೆ ಕೊನೆ ಮಗುವ ಮೇಲಿನ ಹುಚ್ಚು ಪ್ರೀತಿಗೆ ಕೊನೆಯಿಲ್ಲ
ಹಿರಿಯ ಕೂಸ ಮೇಲಿರುವ ಆತ್ಮ ವಿಶ್ವಾಸ ಇನ್ನಾರ ಮೇಲಿರಲಿಲ್ಲ
ಅದರೂ ಮಕ್ಕಳೆಲ್ಲಾ ನನ್ನವೆಂಬ ಮಡಿಲ ಮಮತೆಗೆ ಕೊನೆಯಿಲ್ಲ
ತಾನೂ ಓರ್ವ ಮಗಳಾದರೂ ಪತಿಯ ಮನೆಯೆಂದಿಗೂ ಬಿಡಲಿಲ್ಲ
ಮಕ್ಕಳೆಷ್ಟಾದರೂ ಕೈ ಹಿಡಿದ ಪತಿಯ ಮೇಲಣ ಪ್ರೀತಿಗೆ ಕೊನೆಯಿಲ್ಲ
ಸತಿ ಸುಮವೇ ನಿನಗಾರು ಸಮವೇ ಎಂದರೆ ಅತೀಶಯೋಕ್ತಿಯಲ್ಲ
ನಿನ್ನಿಂದ ಬಾಳಿನಲಿ ಹೆಚ್ಚಿದ ನನ್ನ ಜೀವನ ಸಂಪ್ರೀತಿಗೆ ಕೊನೆಯಿಲ್ಲ
ಎಲ್ಲರಂತೆ ನಾವು ಒಂದು ಗೂಡು ನಿರ್ಮಿಸುವ ಬಯಕೆ ಈಡೇರಿತಲ್ಲ
ಸ್ವತಃ ಬಂಗಲೆಯಲ್ಲಿದ್ದರೂ ತವರ ಗುಡಿಸಲ ಮೇಲಾಸೆಗೆ ಕೊನೆಯಿಲ್ಲ
ತಮ್ಮಂತೆ ತಮ್ಮ ಕಂದಮ್ಮಗಳ ಕಾಡುವ ಕಷ್ಟಗಳ ಕಾಣುವ ಆಸೆಯಿಲ್ಲ
ನಮ್ಮ ನಾಮವ ಮೆರೆಸುವ ಕುಡಿಗಳನು ಮೆರೆಸುವಾಸೆಗೆ ಕೊನೆಯಿಲ್ಲ
ಜಗದೊಳಗೆ ಸ್ನೇಹವು ಎಷ್ಟೊಂದು ಒಲುಮೆ ಚೈತನ್ಯ ತುಂಬಿರುವುದಲ್ಲ
"ಸಿಡಿಲನ" ಮನದೊಳು ತುಂಬುತ್ತಿರುವ ಗೆಳೆತನದ ಭವ್ಯತೆಗೆ ಕೊನೆಯಿಲ್ಲ
ವೈಲೇಶ ಪಿ ಯೆಸ್ ಕೊಡಗು
೨೧/೩/೨೦೧೮
Comments
Post a Comment