ನಗರ- ನರಕ

ನಗರ- ನರಕ
~~~~~~~
ನಾಕವಲ್ಲವಿದು ನರಕಕೂ ಮೀರಿದುದು
ಮಹಾನಗರವೆಂದಿದನು ಕರೆಯುತಿಹರು
ನೀಲಗಗನದೆತ್ತರ ಹಬ್ಬಿದೆ ವ್ಯಾಪಾರ ಜಾಲ
ನಗರವೂ ಬೆಳೆದಿದೆ ಹನುಮಂತನ ಬಾಲ
ಅನ್ನದ ನಿಜ ಬೆಲೆಯನ್ನಿಲ್ಲಿ ಅರಿಯಬೇಕಲ್ಲ

ಅಂಬರಚುಂಬಕ ಅಂತಸ್ತಿನ ಐಷಾರಾಮಿ
ತಂಗಾಳಿಯ ಬಾಹುಗಳಿಗೂ ನಿಲುಕದಂತ
ತಂಪುಪೆಟ್ಟಿಗೆಯ ತೆರದಿ ಇಂಪುಗಾನ ಸೂಸಿ
ಕಿಸೆಗೆ ಕತ್ತರಿಯಿಕ್ಕುವ ಚಹದ ಬೆಲೆ ಕೇವಲ
ಶತಕದ ಮೇಲೆರಡು ದಶಕ ಆದರೂ ಅತೃಪ್ತಿ

ಗಾಂಧಿ ನಗರದ ಗಲ್ಲಿಯ ಬೀದಿ ನಾಯಿ ಬಿಲ್ಲಿ
ಕಾಜಾಣದ ನಡುವೆ ಇಕ್ಕುವ ಹತ್ತು ರೂಪಾಯ
ತುತ್ತು ಕೂಳಿನ ರುಚಿ ಮಾಯವಾಗಿಹುದಿಲ್ಲಿ. 
ಶುಚಿ ಏಕಾಂತ ತಂಪು ಮಾಡಿನ ಕೃತಕ ತೋಪು
ಸೆಳೆದಿಹವು ನಮ್ಮ ಆಗಸ ತೇರಿನ ತೊಟ್ಟಿಲಲಿ

ಇಂದಿರಾ ಕ್ಯಾಂಟೀನ್ ಕೆಂಪೇಗೌಡ ಬಸ್ಸು ಸಾಲು
ನಾಸಿಕಕೆ ರಾತ್ರಿ ಪೂರಾ ಸಕಲರ ನಿಸರ್ಗ ಸವಾಲು
ವಿಸರ್ಜನೆಗೊಳಿಸಿದ ಪರಿಮಳಯುಕ್ತ ಘಮಲು
ಕಾಂಪೌಂಡಿನಾಚೆಗೆ ಅಲ್ಲಲ್ಲಿ ಹರಡಿದ ಚಿಂದಿಗಳು
ಒಳಗೆ ರುಚಿಯ ಕೊರತೆಯ ತಣ್ಣನೆ ತಿಂಡಿಗಳು

ಪ್ರಥಮನಿಲ್ಲಿ ಖರ್ಚು ವೆಚ್ಚಗಳೆದು ಅದೆಲ್ಲೆಷ್ಟು
ತೆಗೆದಿಟ್ಟು ಮತ್ತೇನು ಮಾಡಿಹನೋ ಬಲ್ಲವರಾರು 
ದ್ವಿತೀಯನು ಗಿರಾಕಿಯೊಡಗೂಡಿ ತಾನುಂಬುವನು
ತೃತೀಯಾತ್ಮನು ಅಮ್ಮನ ಹಿಂಬಾಲಕರು ಇತ್ತಿಹ
ವಿತ್ತವ ಅದೆತ್ತೆತ್ತ ಹಂಚುತಿಹನೋ ನೀವ್ಬಲ್ಲಿರೇನು

ವೈಲೇಶ ಪಿ ಯೆಸ್ ಕೊಡಗು
೨೭/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು