ಬೇಬಿ ಚೋಂದಮ್ಮ

ಕೊಡಗಿನ ಕವಿ ಪರಿಚಯ
========================
ಮುಲ್ಲೆಂಗಡ ಬೇಬಿ ಚೋಂದಮ್ಮ
ಕೋಕೇರಿ ಗ್ರಾಮದ ಚೇನಂಡ ಮುತ್ತ್ತಣ್ಣ
ಹಾಗೂ ಮುತ್ತವ್ವ ದಂಪತಿಗಳ ಹಿರಿಯ
ಮಗಳಾಗಿ ಹುಟ್ಟಿ ಮುಲ್ಲೆಂಗಡ ಶಂಕರಿ ಪೊನ್ನಪ್ಪನವರ ಧರ್ಮಪತ್ನಿಯಾಗಿ
ಒಂದು ಗಂಡು ಒಂದು ಹೆಣ್ಣು ಮಗುವಿನ ತಾಯಿಯಾಗಿ ತೂಕ್ ಬೊಳಕ್ ಪತ್ರಿಕೆಯ ಸಹ ಸಂಪಾದಕಿಯಾಗಿ ಸಾಹಿತ್ಯ ಲೋಕಕ್ಕೆ ಅಪಾರವಾದ ಸೇವೆ ಮಾಡಿರುತ್ತಾರೆ.

ಸುಮಾರು 5ವರ್ಷ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ 34 ವರ್ಷ ಪ್ರೌಢಶಾಲಾ ಶಿಕ್ಷಕಿಯಾಗಿ ಸುದೀರ್ಘ  ಸೇವೆ ಸಲ್ಲಿಸಿದ ಕೀರ್ತಿ ಇವರದು.

ಪಡ್ ಞಾರ್ ಕ್ ಪೋನಲ್ಲಿ ಎಂಬ ಪ್ರವಾಸ ಕಥನದ ಜೊತೆಗೆ ಕೆಲ ಪುಸ್ತಕ ಬರೆದಿದ್ದಾರೆ.
ಒಳ್ಳೆಯ ವಿಮರ್ಶಕರು,
ಕನ್ನಡ ಪಂಡಿತೆ,
ಕನ್ನಡ ರತ್ನ
ಹಿಂದಿ ಭಾಷಾ ಪ್ರವೀಣರು
B ed
ಪದವಿ ಪಡೆದಿರುವ ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿದ ಅನುಭವ ಹೊಂದಿದ್ದಾರೆ.
ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿರಾಜಪೇಟೆಯ  ಅಧ್ಯಕ್ಷರು ಆದ ಮಧೋಶ್ ಪೂವಯ್ಯನವರ ತಾಯಿಯು ಹೌದು. ಇವರಿಗೆ ಆ ಕಮ್ಮರ್ ಟಪ್ಪ ಹಾಗೂ ಕಾವೇರಿ ಮಾತೆ ಶ್ರೀ ಇಗ್ಗುತಪ್ಪ ಆಯುರಾರೋಗ್ಯವನ್ನು ಕೊಟ್ಟು ಇನ್ನೂ ಹೆಚ್ಚಿನ ಸೇವೆಗೆ ಅನುಕೂಲ ಮಾಡಿ ಕೊಡಲೆಂದು ಆ ದೇವನಲ್ಲಿ ಪ್ರಾರ್ಥಿಸುತ್ತೇನೆ  

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು