ಉದ್ಯಾನ ಕವಿಗೋಷ್ಠಿ
ಉದ್ಯಾನ ಕವಿಗೋಷ್ಠಿ
~~~~~~~~~~~
ಕರುನಾಡ ರಾಜಾಸೀಟಿನ ಹೂ ಬನದಲ್ಲಂದು
ಅರಳಿದ ಸುಮದೆದೆಯಲಿ ಕುಳಿತ ದುಂಬಿಗಳ
ನಾಸಿಕಕ್ಕದು ಒಬ್ಬಟ್ಟಿನ ಘಮಲ ಜೊತೆಗೆ ನಂದಿನಿ
ತುಪ್ಪ ಕಡಲೆ ಬೇಳೆಯೊಡೆಯ ಘಾಟಿನ ಅಮಲು
ಗಿರಿಶೃಂಗಗಳೆಡೆಯಿಂದ ಹಾರಿಬಂದ ಕೋಗಿಲೆಯ
ಕರ್ಣಕ್ಕದು ಕೊಡಗಿನ ಕವಿಗಳ ಸುಮಧುರ ಕಂಠದ
ಕಸ್ತೂರಿ ಕನ್ನಡ ಕವನಗಳ ಕಂಪಿನ ಜೊತೆಗೆ ಕವಿತೆಗಳ
ರಾಗದ ಅನುಕರಣೆಯ ಆಲಾಪನೆಯ ಗಮ್ಮತ್ತು
ನಗುನಗುತಾ ನುಲಿದು ನಲಿವ ಪ್ರವಾಸಿಗರ ಮನದಿ
ಮಿಂಚಿನ ಸಂಚಾರ ಮೂಡಿಸಿದ ಕವಿಗೋಷ್ಠಿಯ
ಸೊಗಸು ಅಚ್ಚುಮೆಚ್ಚಿನ ಪ್ರಬುದ್ಧ ಕವಿ,ಕವನಗಳು
ಅಚ್ಚುಕಟ್ಟಿನ ಅಯೋಜನೆಗೆ ಮತ್ತೊಂದು ಕೋಡು
ಬಿಢಾರಕ್ಕೆಂದು ಬಂದಿದ್ದ ಮೈಸೂರರಸರು ಉದ್ಯಾನದ
ಕಲರವವನಾಲಿಸಿ ನಿತ್ಯದ ವಾಯುವಿಹಾರಕ್ಕೆಂದು
ತಾಸಿಗೂ ಮುನ್ನವೇ ರಾಜಾಸೀಟಿನೆಡೆ ಆಗಮನ
ಯುಗಾದಿ ಕವಿಗೋಷ್ಠಿಯ ಕಣ್ಣಾರೆ ಕಂಡ ದೊರೆ
ಶತ ವರುಷಗಳ ಹಿಂದೆ ನಾನಂದು ಕಟ್ಟಿದ ಕನ್ನಡ
ಸಾಹಿತ್ಯ ಪರಿಷತ್ತು ಎನ್ನ ಮನದ ಬಯಕೆಗಳನು
ಅನವರತ ನಡೆಸುತ್ತಿದೆ ನನಗಿನ್ನೇನು ಬೇಕು ಸಂಪತ್ತು
ಎಂದುಸುರುತ್ತಾ ನಡೆದರು ತಮ್ಮರಮನೆಯ ಕಡೆ.
ವೈಲೇಶ ಪಿ ಯೆಸ್ ಕೊಡಗು
೧/೪/೨೦೧೮
Comments
Post a Comment