ಚೌ ಚೌಪದಿ : ೧
ಚೌ ಚೌಪದಿ : ೧
ರಾಮ ನಾಮವ ಜಪಿಸುತ್ತಿದ್ದ ರಾಯರು
ನಿಧಾನವಾಗಿ ತೂಗುಮಂಚವ ಏರಿದರು
ನಾದಿನಿ ತಂದಿತ್ತ ಕಾಫಿಯ ಗುಟುಕರಿಸಿದರು
ಗೋಡೆಯ ಮೇಲಿನ ಛಾಯಾಚಿತ್ರ ನೋಡಿದರು
ನಲವತ್ತೈದು ವರ್ಷಗಳ ಹಿಂದಿನ ರಾಧೆ ಕತೆ
ನನಗಾಗಿ ಹಾಡಿದ್ದಳು ನಗುನಗುತಾ ಕವಿತೆ
ಬೆರಗಾಗಿ ನೋಡಿದರು ರಾಯರು ಹಿಂದಿರುಗಿ
ಹಿಂದುಗಡೆ ನಿಂತಿದ್ದರು ರಾಧೆ ಮಂಚವ ತೂಗಿ
ವೈಲೇಶ ಪಿ ಯೆಸ್ ಕೊಡಗು
೨೫/೩/೨೦೧೮
Comments
Post a Comment